ಬ್ಯಾನರ್ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು

ಬ್ಯಾನರ್ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು


ಬಳ್ಳಾರಿ, (ಜನವರಿ 05): ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣದ (ಬಳ್ಳಾರಿ ಹಿಂಸೆ) ತನಿಖೆ ಚುರುಕುಗೊಂಡಿದೆ. ಬಳ್ಳಾರಿಯ ಅವಂಭಾವಿಯಲ್ಲಿರುವ ರೆಡ್ಡಿ ನಿವಾಸದಲ್ಲಿ ಬಾಂಬ್ ನಿಷ್ಕ್ರಿಯ ದಳ ಇಂಚಿಂಚು ಪರಿಶೀಲನೆ ನಡೆಸಿದೆ. ಬುಲೆಟ್ ಪತ್ತೆ ಹಚ್ಚಲು ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ಕೊಟ್ಟಿದ್ದು, ಬುಲೆಟ್‌ಗಳಿಗಾಗಿ ಹುಡುಕಾಟ ನಡೆಸಿತ್ತು. DSMD ಮಿಷನ್‌ಗಳ ಮೂಲಕ ಘಟನಾ ಸ್ಥಳದ ಮೂಲೆ ಮೂಲೆಯನ್ನ ಸರ್ಚ್ ಮಾಡಿದ್ರು. ಬಾಂಬ್ ನಿಷ್ಕ್ರೀಯ ತಂಡಕ್ಕೆ FSL ಟೀಮ್ ಕೂಡ ಸಾಥ್ ನೀಡಿದೆ. ಇನ್ನು ಗಲಾಟೆ ವೇಳೆ ಹಾರಿದ್ದ ಗುಂಡು ಗಾಲಿ ಜನಾರ್ದನ ರೆಡ್ಡಿ ನಿವಾಸದ ಕಚೇರಿಯ ಗ್ಲಾಸ್ ಗೆ ತಗುಲಿದೆ, ಗಾಜು ಪುಡಿ ಪುಡಿಯಾಗಿದೆ. ಇದರಿಂದ ನಿಷ್ಕ್ರಿಯ ಬಾಂಬ್ ದಳ, ಜನಾರ್ದನ ರೆಡ್ಡಿ ಕಚೇರಿಯೊಳಗೆ ಪರಿಶೀಲನೆ ನಡೆಸಲಾಗಿದೆ.

ಇದನ್ನೂ ನೋಡಿ: ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್ ಮ್ಯಾನ್ ಬಹಿರಂಗ ಬಂಧನ



Source link

Leave a Reply

Your email address will not be published. Required fields are marked *