ಉಡುಪಿ, ಜನವರಿ 05: ಉಡುಪಿ ಶ್ರೀ ಕೃಷ್ಣನಿಗೆ ಭಕ್ತ ಚಿನ್ನದ ಭಗವದ್ಗೀತೆ ಅರ್ಪಣೆಗೆ ಮುಂದಾಗಿದ್ದಾರೆ. ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪ ವಿಶೇಷ ಕಾರ್ಯಕ್ರಮದಂದು ಕೃಷ್ಣ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ದೆಹಲಿಯ ಭಕ್ತ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಚಿನ್ನದ ಹಾಳೆಯಲ್ಲಿ ಭಗವದ್ಗೀತೆ 18 ಅಧ್ಯಾಯಗಳ 700 ಶ್ಲೋಕಗಳನ್ನು ಮುದ್ರಿಸಲಾಗಿದೆ. ಚಿನ್ನದ ರಥದಲ್ಲಿ ಭಗವದ್ಗೀತೆಯ ಮೆರವಣಿಗೆ ಮೂಲಕ ಅರ್ಪಿಸಲಿದ್ದಾರೆ. ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟೆಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.