Headlines

Breaking: ವೆನುಜುವೇಲ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ಉಪಾಧ್ಯಕ್ಷ JD Vance ಮನೆ ಮೇಲೆ ಗುಂಡಿನ ದಾಳಿ | Shots Fired At Us Vp Jd Vance Ohio Residence One Arrested Breaking News San

Breaking: ವೆನುಜುವೇಲ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ಉಪಾಧ್ಯಕ್ಷ JD Vance ಮನೆ ಮೇಲೆ ಗುಂಡಿನ ದಾಳಿ | Shots Fired At Us Vp Jd Vance Ohio Residence One Arrested Breaking News San


ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ಓಹಿಯೋ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ದಾಳಿ ನಡೆದಾಗ ವ್ಯಾನ್ಸ್‌ ಕುಟುಂಬ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

ನ್ಯೂಯಾರ್ಕ್‌ (ಜ.5): ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಒಬ್ಬನ ಬಂಧನವಾಗಿದೆ. ಓಹಿಯೋದಲ್ಲಿರುವ ಜೆಡಿ ವ್ಯಾನ್ಸ್‌ ಅವರ ಮೇಲೆ ದಾಳಿ ನಡೆದಿದ್ದು, ಘಟನೆಯ ಬೆನ್ನಲ್ಲಿಯೇ ಅಮೆರಿಕದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ಸಮಯದಲ್ಲಿ ವ್ಯಾನ್ಸ್ ಕುಟುಂಬವು ಮನೆಯಲ್ಲಿ ಇದ್ದಿರಲಿಲ್ಲ. ಇನ್ನು ಗುಂಡಿನ ದಾಳಿ ನಡೆಸಿದ ವ್ಯಕ್ತಿ ಉಪಾಧ್ಯಕ್ಷರ ನಿವಾಸಕ್ಕೆ ಪ್ರವೇಶಿಸಿದ್ದ ಎನ್ನುವುದನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ ಎಂದು ಫೆಡರಲ್ ಕಾನೂನು ಜಾರಿ ಮೂಲವನ್ನು ಉಲ್ಲೇಖಿಸಿ ವರದಿಯಾಗಿದೆ.

ವೈರಲ್‌ ಆಗಿರುವ ಪೋಟೋದಲ್ಲಿ ಜೆಡಿ ವ್ಯಾನ್ಸ್‌ ಅವರ ಮನೆಯ ಕಿಟಿಕಿಯ ಗಾಜುಗಳಿಗೆ ಹಾನಿಯಾಗಿದ್ದನ್ನು ತೋರಿಸಿವೆ. ಕಾನೂನು ಜಾರಿ ಅಧಿಕಾರಿಯ ಪ್ರಕಾರ, ವಶಕ್ಕೆ ಪಡೆದಿರುವ ವ್ಯಕ್ತಿ ವ್ಯಾನ್ಸ್ ಅಥವಾ ಅವರ ಕುಟುಂಬವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದನೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಮೆರಿಕ ಸರ್ಕಾರವು ವೆನೆಜುವೆಲಾದ ಮೇಲೆ ದಾಳಿ ಮಾಡಿ, ಅಧ್ಯಕ್ಷನನ್ನು ಬಂಧನ ಮಾಡಿರುವುದಕ್ಕೆ ಜಗತ್ತಿನಿಂದ ಟೀಕೆಗಳು ಎದುರಿಸುತ್ತಿರುವ ಸಮಯದಲ್ಲಿ ಘಟನೆ ನಡೆದಿದೆ. ಅಮೆರಿಕದ ಕ್ರಮವನ್ನು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಟೀಕಿಸಲಾಗಿದೆ.



Source link

Leave a Reply

Your email address will not be published. Required fields are marked *