ಮಂಡ್ಯ, ಜನವರಿ 06: ಜಿಲ್ಲೆಗೆ ಕೈಗಾರಿಕೆ ತರುವ ವಿಚಾರವಾಗಿ ಕೇಂದ್ರ ಸಚಿವರು ಹೆಚ್. ಡಿ. ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಜಾಗ ಇದೆ, ನೀವು ಇಂಡಸ್ಟ್ರಿ ತೆಗೆದುಕೊಂಡು ಬನ್ನಿ. ರಾಜ್ಯ ಸರ್ಕಾರ ಇಂಡಸ್ಟ್ರಿ ತರಲು ಸಹಕಾರ ಕೊಡ್ತಿಲ್ಲ, ಮಂಡ್ಯದಲ್ಲಿ ಇಂಡಸ್ಟ್ರಿ ಸ್ಥಾಪನೆಗೆ ಜಾಗ ಇಲ್ಲ ಎಂದು ಡಿಕೆ ಹೇಳಿದ್ದರು. ಹೀಗಾಗಿ ಡಿಸಿ ಜೊತೆಗೆ ತೆರಳಿ ಉದ್ಯಮ ಜಾಗ ಗುರುತಿಸಿದ ಗಣಿಗ ರವಿಕುಮಾರ್, ಉದ್ಯಮ ಸ್ಥಾಪನೆಗೆ ಸೂಕ್ತ ಸ್ಥಳ, ಎಲ್ಲದಕ್ಕೂ ಸಹಕಾರ ಕೊಡುತ್ತೇವೆ. ಮಂಡ್ಯಕ್ಕೆ ಕೈಗಾರಿಕೆ ತೆಗೆದುಕೊಂಡಿದೆ ಬನ್ನಿ. ಆ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಕದನ ಮತ್ತೊಂದು ಹಂತಕ್ಕೆ ತಲುಪಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.