ಮದುವೆ ದಿನ ವಿಶೇಷ ಚೇತನ ತಂಗಿ ಊಟ ಮಾಡಿಸಿದ ಖ್ಯಾತ ನಟಿ; ನೋಡುತ್ತ ಕೂತ ಗಂಡ; Video Viral

ಮದುವೆ ದಿನ ವಿಶೇಷ ಚೇತನ ತಂಗಿ ಊಟ ಮಾಡಿಸಿದ ಖ್ಯಾತ ನಟಿ; ನೋಡುತ್ತ ಕೂತ ಗಂಡ; Video Viral

ಮದುವೆ ದಿನ ವಿಶೇಷ ಚೇತನ ತಂಗಿ ಊಟ ಮಾಡಿಸಿದ ಖ್ಯಾತ ನಟಿ; ನೋಡುತ್ತ ಕೂತ ಗಂಡ; Video Viral

Actress Marriage: ಮದುವೆ ಆಗುವ ಹುಡುಗಿ-ಹುಡುಗಿ ಅಂದು ಯಾವಾಗಲೂ ಸುಮಧುರ ಕ್ಷಣಗಳನ್ನು ಕಳೆಯಲು ಬಯಸುತ್ತಾರೆ. ಸಂಗೀತದಲ್ಲೋ, ಊಟ ಮಾಡುವಾಗಲೂ ಕೂಡ ಪರಸ್ಪರ ಒಬ್ಬರಿಗೆ ಒಬ್ಬರು ಟೈಮ್‌ ಕೊಡುತ್ತಾರೆ. ನಟಿ ಪಾರ್ವತಿ ಅವರು ಮದುವೆ ವೇಳೆ ವಿಶೇಷಚೇತನ ತಂಗಿಗೆ ಊಟ ಮಾಡಿಸಿರುವ ವಿಡಿಯೋ ವೈರಲ್‌ ಆಗ್ತಿದೆ.

ಜನಪ್ರಿಯ ಧಾರಾವಾಹಿ ‘ಅಡ್ವೊಕೇಟ್ ಅಂಜಲಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಪಾರ್ವತಿ ಎಸ್. ಅಯ್ಯರ್ ಅವರು ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನೂಪ್ ಕೃಷ್ಣ ಎನ್ನುವವರ ಜೊತೆ ಅವರ ಮದುವೆ ನಡೆದಿದೆ.

’ಅಡ್ವೊಕೇಟ್ ಅಂಜಲಿ’ ಧಾರಾವಾಹಿಯ ನಟಿ ಪಾರ್ವತಿ ಎಸ್ ಅಯ್ಯರ್ ನಟಿಸಿದ್ದರು. ಕೇರಳದಲ್ಲಿ ಈ ಮದುವೆ ಭಾರೀ ಫೇಮಸ್‌ ಆಗಿದೆ. ಸಂಪ್ರದಾಯಬದ್ಧವಾಗಿ ಈ ಜೋಡಿಯ ಮದುವೆ ನೆರವೇರಿದೆ. ಇವರ ಮದುವೆ ಫೋಟೋ, ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಭಿಮಾನಿಗಳು ಮತ್ತು ಸಹನಟರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಪಾರ್ವತಿ ಅವರು ಧಾರಾವಾಹಿಯ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ ‘ಅಡ್ವೊಕೇಟ್ ಅಂಜಲಿ’ ಧಾರಾವಾಹಿಯ ಅಂಜಲಿ ಪಾತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ.

ಇನ್ನು ಮದುವೆ ಆಗಿ ಊಟ ಮಾಡುವಾಗಲೂ ಕೂಡ ಅವರು ತಂಗಿಗೆ ಊಟ ಮಾಡಿಸಿರುವ ವಿಡಿಯೋ ವೈರಲ್‌ ಆಗಿದೆ. ಸಾಮಾನ್ಯವಾಗಿ ಮದುವೆ ಆದ ದಿನ ಹುಡುಗ, ಹುಡುಗಿಗೆ ಊಟ ಮಾಡಿಸೋದು, ಹುಡುಗಿ ಹುಡುಗನಿಗೆ ಊಟ ಮಾಡಿಸೋದು ಸಂಪ್ರದಾಯ. ಈ ಮಧ್ಯೆ ತಂಗಿಗೆ ಊಟ ಮಾಡಿಸಿರೋದು ಅನೇಕರ ಮೆಚ್ಚುಗೆ ಗಳಿಸಿದೆ. ಆ ವೇಳೆ ಗಂಡ ನಟಿಯ ಮುಖ ನೋಡಿಕೊಂಡು ಕೂತಿದ್ದಾರೆ.

ಪಾರ್ವತಿ ಅವರು ಸಂಗೀತದ ಸಮಯದಲ್ಲಿ ವಿಶೇಷಚೇತನ ತಂಗಿಯ ಜೊತೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಕೂಡ ವೈರಲ್‌ ಆಗ್ತಿದೆ. ಪಾರ್ವತಿ ಅವರು ತಮ್ಮ ಖುಷಿಯ ಸಮಯದಲ್ಲಿ ಕೂಡ ತಂಗಿಯನ್ನು ಮರೆತಿಲ್ಲ.

Source link

Leave a Reply

Your email address will not be published. Required fields are marked *