Bigg Boss ಸ್ಪಂದನಾ ಸೋಮಣ್ಣ ಬಾಯ್​ಫ್ರೆಂಡ್​ ಯಾರು? ಮದುವೆ ಬಗ್ಗೂ ಕೊಟ್ಟರು ಬಿಗ್​ ಅಪ್​ಡೇಟ್​!

Bigg Boss ಸ್ಪಂದನಾ ಸೋಮಣ್ಣ ಬಾಯ್​ಫ್ರೆಂಡ್​ ಯಾರು? ಮದುವೆ ಬಗ್ಗೂ ಕೊಟ್ಟರು ಬಿಗ್​ ಅಪ್​ಡೇಟ್​!

Bigg Boss ಸ್ಪಂದನಾ ಸೋಮಣ್ಣ ಬಾಯ್​ಫ್ರೆಂಡ್​ ಯಾರು? ಮದುವೆ ಬಗ್ಗೂ ಕೊಟ್ಟರು ಬಿಗ್​ ಅಪ್​ಡೇಟ್​!
ಬಿಗ್​ಬಾಸ್​ ಫಿನಾಲೆಗೆ ಕೆಲವೇ ದಿನಗಳಿರುವಾಗ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದ ನಂತರ, ಅವರು ತಮ್ಮ ಬಾಯ್‌ಫ್ರೆಂಡ್ ಮತ್ತು ಮದುವೆಯ ಕುರಿತ ಪ್ರಶ್ನೆಗಳಿಗೆ ಜಾಣ್ಮೆಯಿಂದ ಉತ್ತರಿಸಿ, ಸದ್ಯಕ್ಕೆ ಜನರ ಪ್ರೀತಿಯನ್ನು ಆನಂದಿಸುವುದಾಗಿ ಹೇಳಿದ್ದಾರೆ.
ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ಫಿನಾಲೆಗೆ ಇನ್ನು ಕೆಲವೇ ದಿನಗಳು ಇರುವಾಗಲೇ ಬಿಗ್​ಬಾಸ್​​ ಅವರಿಗೆ ಎಲಿಮಿನೇಷನ್​ ಶಾಕ್​ ಕೊಟ್ಟಿದೆ.

ಕನ್ನಡ ಮತ್ತು ತೆಲುಗು ಚಿತ್ರರಂಗದಿಂದ ಸ್ಪಂದನಾ ಇದಾಗಲೇ ಫೇಮಸ್​ ಆಗಿದ್ದರೂ, ಬಿಗ್​ಬಾಸ್​ನಿಂದ ಹೊರಬಂದ ಮೇಲೆ ಸಹಜವಾಗಿ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು, ಇನ್ನೂ ಸ್ವಲ್ಪ ದಿನ ಮಾಧ್ಯಮಗಳಲ್ಲಿ ಹೈಲೈಟ್​ ಆಗುತ್ತಿರುತ್ತಾರೆ.

ಇದೇ ವೇಳೆ ಸ್ಪಂದನಾ ಸೋಮಣ್ಣ ಅವರು ತಮ್ಮ ಬಿಗ್​ಬಾಸ್​ ಜರ್ನಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆ ಕೆಲವು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಸ್ಪಂದನಾ ಸೋಮಣ್ಣ ಅವರ ಬಾಯ್​ಫ್ರೆಂಡ್​ ಮತ್ತು ಮದುವೆಯ ಬಗ್ಗೆಯೂ ಕೆಲವೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿರೋದು ಇದೆ. ಅದೇ ಕಾರಣಕ್ಕೆ ಅವರಿಗೆ ಈ ವಿಷಯಗಳ ಬಗ್ಗೆ ಪ್ರಶ್ನಿಸಲಾಗಿದೆ.

ಅದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ ಸ್ಪಂದನಾ. ನಿಮಗೆ ಬಾಯ್​ಫ್ರೆಂಡ್​ ಇದ್ದಾರಾ ಎಂಬ ಪ್ರಶ್ನೆಗೆ, ನೇರವಾಗಿ ಏನನ್ನೂ ಹೇಳದ ಸ್ಪಂದನಾ, ನನಗೆ ಬಾಯ್​ಫ್ರೆಂಡ್​ ಇದ್ದಾರೋ, ಇಲ್ಲವೋ ಎಂದು ನೀವೇ ಗೆಸ್​ ಮಾಡ್ತಾ ಇರಿ. ಇದೇ ಬೆಸ್ಟ್​. ಈ ವಿಷಯದ ಬಗ್ಗೆ ಆಗಾಗ್ಗೆ ಮಾತನಾಡ್ತಾ ಇದ್ದರೆ ನನಗೂ ಖುಷಿ ಎಂದಿದ್ದಾರೆ!

ಇದೇ ವೇಳೆ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಂದನಾ, ಮದುವೆಯ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಬಿಗ್​ಬಾಸ್​​ನಂಥ ಪ್ಲಾಟ್​ಫಾರ್ಮ್​ ಈಗ ಸಿಕ್ಕಿದೆ. ಜನರ ಪ್ರೀತಿ ಸಿಕ್ಕಿದೆ. ಅದನ್ನು ಎಂಜಾಯ್​ ಮಾಡಿ, ಆಮೇಲೆ ಮದುವೆಯ ಬಗ್ಗೆ ಯೋಚನೆ ಮಾಡುತ್ತೇನೆ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

Source link

Leave a Reply

Your email address will not be published. Required fields are marked *