ನಮ್ಮಲ್ಲಿ ಪ್ರತಿಭೆಗಳಿಗೆ, ಜುಗಾಡ್ ಐಡಿಯಾಗಳಿಗೇನು ಕೊರತೆ ಇಲ್ಲ ಬಿಡಿ. ತಮ್ಮ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ವಿಭಿನ್ನ ಶೈಲಿಯ ದೇಸಿ ಉಪಾಯಗಳನ್ನು (ದೇಸಿ ಕಲ್ಪನೆ) ಬಳಸುತ್ತಾರೆ. ಇದಕ್ಕೆ ಉದಾಹರಣಯಂತಿದೆ ಈ ವಿಡಿಯೋ. ಸಾಮಾನ್ಯವಾಗಿ ಚಪಾತಿ ಅಥವಾ ಪೂರಿ ಲಟ್ಟಿಸಲು ಲಟ್ಟಣಿಗೆ ಬಳಸುತ್ತೇವೆ. ಆದರೆ ಇಲ್ಲೊಬ್ಬ ಯುವಕನು (ಯುವಕ) ಟೊಮೊಟೊದಿಂದಲೇ ಪೂರಿ ಲಟ್ಟಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
Maximum_manthan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿಯುವಕನೊಬ್ಬ ಲಟ್ಟಣಿಗೆ ಬದಲಾಗಿ ಟೊಮೊಟೊದಿಂದ ಪೂರಿ ಲಟ್ಟಿಸುವುದು ಕಂಡುಬರುತ್ತದೆ. ಜುಗಾಡ್ ಐಡಿಯಾ ಬಳಸಿ ಲಟ್ಟಿಸಿದ ಪೂರಿ ದುಂಡಗೆ ಇರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ:12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ
ಈ ವಿಡಿಯೋ ಎಂಬತ್ತೇಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಇದು ತಂತ್ರಜ್ಞಾನದ ಪ್ರಭಾವ ಎಂದರೆ, ಮತ್ತೊಬ್ಬರು, ಒಳ್ಳೆಯ ಪ್ರಯತ್ನ ಎಂದು ಕಾಮೆಂಟ್ ಮಾಡಲಾಗಿದೆ. ಇತರರು, ಅದ್ಭುತ ಉಪಾಯ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ