ಬ್ರಹ್ಮಗಂಟು ಸೀರಿಯಲ್ನಲ್ಲಿ, ಸೌಂದರ್ಯಳಿಗೆ ಪಾಠ ಕಲಿಸಲು ಮಾಡೆಲ್ ದಿಶಾ ಆಗಿ ಬದಲಾಗಿರುವ ದೀಪಾ, ಇದೀಗ ತನ್ನ ಪತಿ ಚಿರುಗೆ ಪ್ರಪೋಸ್ ಮಾಡಿದ್ದಾಳೆ. ಚಿರು ಈ ಪ್ರಸ್ತಾಪವನ್ನು ಒಪ್ಪಿಕೊಂಡಂತೆ ಕಾಣುತ್ತಿದ್ದು, ಇದು ದೀಪಾಳ ಕನಸೋ ಅಥವಾ ಇದರ ಹಿಂದೆ ಬೇರೆ ಸತ್ಯ ಅಡಗಿದೆಯೋ ಎಂಬ ಕುತೂಹಲ ಮೂಡಿದೆ.

ಬ್ರಹ್ಮಗಂಟು ಸೀರಿಯಲ್ (Brahmagantu Serial) ಇದೀಗ ಯಾರೂ ಊಹಿಸದ ರೋಚಕ ತಿರುವು ಪಡೆದುಕೊಂಡಿದೆ. ದೀಪಾನೇ ದಿಶಾ ಆಗಿ ಎಲ್ಲರಿಗೂ ಚಮಕ್ ಕೊಡುತ್ತಿದ್ದಾಳೆ. ಇವಳ ಅಸಲಿಯತ್ತು ರೂಪಾಗೆ ಬಿಟ್ಟರೆ ಬೇರೆಯವರಿಗೆ ತಿಳಿದಿಲ್ಲ. ಅರ್ಚನಾ ಇದರ ಹಿಂದೆ ಇರೋ ಕಾರಣ, ಅವಳಿಗೆ ಗೊತ್ತು ಅಷ್ಟೇ.

ಆದರೆ, ರೂಪವೇ ಮುಖ್ಯ ಎಂದುಕೊಂಡ ಸೌಂದರ್ಯನ ವಿರುದ್ಧ ತಿರುಗಿ ಬಿದ್ದಿರೋ ದೀಪಾ, ಕೆಲವೇ ವರ್ಷ ಇರುವ ಸೌಂದರ್ಯಕ್ಕಿಂತ, ಸದಾ ಇರುವ ಆಂತರಿಕ ಸೌಂದರ್ಯ ಅರ್ಥಾತ್ ಗುಣವೇ ಮುಖ್ಯ ಎನ್ನುವ ವಾದದವಳು. ಇದನ್ನು ಸೌಂದರ್ಯಳಿಗೆ ಮನವರಿಕೆ ಮಾಡಿಕೊಡಲು ಮಾಡೆಲ್ ದಿಶಾ ಆಗಿ ಬಂದಿದ್ದಾಳೆ ದೀಪಾ.

ಇಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ನಡುವೆ ರೂಪಾಗೆ ನಿಜ ತಿಳಿದದ್ದು ಬಿಟ್ಟರೆ, ದಿಶಾ ಮತ್ತು ಚಿರುನ ಒಂದು ಮಾಡಿ, ದೀಪಾಗೆ ಮುಖಭಂಗ ಮಾಡಲು ಸೌಂದರ್ಯ ಕಾಯುತ್ತಿದ್ದಾಳೆ.

ಆದರೆ, ದಿಶಾ ಮತ್ತು ಚಿರು ಲವ್ ಮಾಡ್ತಿದ್ದಾರೆ ಎಂದುಕೊಂಡ ದೀಪಾ ಸಹೋದರ ನರಸಿಂಹ, ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ಅದೇ ವೇಳೆ ದೀಪಾ ಅಪ್ಪ ಮನೆಗೆ ಭೇಟಿ ಕೊಟ್ಟಾಗಲೂ ಸೌಂದರ್ಯ, ದಿಶಾಳನ್ನು ಅವನ ಎದುರೇ ಹಾಡಿ ಹೊಗಳಿ ದೀಪಾಳನ್ನು ತೆಗೆಳಿದ್ದಾಳೆ. ಇದು ದೀಪಾ ಅಪ್ಪನಿಗೆ ಭಾರಿ ನೋವು ಉಂಟು ಮಾಡಿದೆ.

ಇವನ್ನೆಲ್ಲಾ ನೋಡಿ ರೋಸಿ ಹೋದ ದೀಪಾ, ಇನ್ನು ಮುಚ್ಚಿಟ್ಟು ಪ್ರಯೋಜನ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. ಚಿರುಗೆ ರೂಪ ಮುಖ್ಯನೋ, ಗುಣ ಮುಖ್ಯನೋ ನೋಡಿ ಇದಕ್ಕೆ ಮಂಗಳ ಹಾಡುವುದಾಗಿ ಹೇಳಿ ನಿರ್ಧರಿಸಿದ್ದಾಳೆ.

ಅದಕ್ಕಾಗಿ ಆಕೆ, ದಿಶಾ ಆಗಿ ಬೊಕ್ಕೆ ಹಿಡಿದು ಚಿರುಗೆ ಪ್ರಪೋಸ್ ಮಾಡಿದ್ದಾಳೆ. I Love You, ನಿಮ್ಮನ್ನು ಪ್ರೀತಿಸ್ತೇನೆ ಎಂದಾಗ ಚಿರು ಖುಷಿಯಿಂದ ಆ ಬೊಕ್ಕೆ ತೆಗೆದುಕೊಂಡಿದ್ದಾನೆ.

ಇಷ್ಟೇ ಪ್ರೊಮೋದಲ್ಲಿ ತೋರಿಸಲಾಗಿದೆ. ಆದರೆ ಇದು ಸಾಧ್ಯನೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಒಂದೋ ಇದು ದೀಪಾಳ ಕನಸು, ಇಲ್ಲವೇ ದಿಶಾ ಮತ್ತು ದೀಪಾ ಒಬ್ಬರೇ ಎನ್ನುವ ಸತ್ಯ ಚಿರುಗೆ ತಿಳಿದಿದೆ ಎಂದೋ ಅಥವಾ ಪ್ರೊಮೋದಲ್ಲಿ ಮಿಸ್ಲೀಡ್ ಮಾಡಲಾಗಿದೆ ಎಂದೋ ಹೇಳುತ್ತಿದ್ದಾರೆ. ಆದರೆ ಅಸಲಿಯತ್ತು ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Source link
Brahmagantu ಯಾರೂ ಊಹಿಸದ ತಿರುವು: ದಿಶಾಳ ಲವ್ ಪ್ರಪೋಸಲ್ ಒಪ್ಪಿಕೊಂಡ ಚಿರು? ದೀಪಾ ಗತಿ?