ಇನ್ಮುಂದೆ ಸೆಟ್​ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ

ಇನ್ಮುಂದೆ ಸೆಟ್​ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ


ಬೆಂಗಳೂರು, ಜನವರಿ 06: ಗೃಹ ನಿರ್ಮಾಣ ಮಾಡುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸೆಟ್ ಬ್ಯಾಕ್ (ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ) ಬಿಡದೆ ಮನೆ ನಿರ್ಮಿಸಲು ಅವಕಾಶ ನೀಡುತ್ತದೆ. ಸೆಟ್ ಬ್ಯಾಕ್ ನಲ್ಲಿ (ಹಿನ್ನಡೆ) ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಆ ಮೂಲಕ ಸಿಲಿಕಾನ್ ಸಿಟಿಯ (ಬೆಂಗಳೂರು) ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ಗಿಫ್ಟ್ ನೀಡಿದೆ. ಇನ್ನು ಸೆಟ್ ಬ್ಯಾಕ್ ಬಿಡದೆ ಸಮಸ್ಯೆ ಎದುರಿಸುತ್ತಿರುವ ಮನೆ ನಿಟ್ಟುಸಿರು ಬಿಟ್ಟಿದ್ದಾರೆ.

ಸೆಟ್ ಬ್ಯಾಕ್ ನಿಯಮಗಳಲ್ಲಿ ಬದಲಾವಣೆ

ಬೆಂಗಳೂರು ನಗರಾಭಿವೃದ್ಧಿ ಸೆಟ್ ಇಲಾಖೆ ಬ್ಯಾಕ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಮೊದಲು ಮನೆಗಳಿಗೆ 12ಮೀ ವರೆಗೆ ಅಂದರೆ 8 ಅಡಿಯಿಂದ 40 ಅಡಿವರೆಗೆ ಸೆಟ್ ಬ್ಯಾಕ್ ಬಿಡುವ ಅವಶ್ಯಕತೆ ಇತ್ತು. ಆದರೆ ಇದೀಗ ಸರ್ಕಾರ ಸೆಟ್ ಬ್ಯಾಕ್ ಕಡಿತ ಹಾಗೂ ವಿನಾಯಿತಿ ನೀಡಿದ್ದು, ಕಟ್ಟಡ ಯಾವುದಾದರೂ ಒಂದು ಬದಿಯಲ್ಲಿ ಸೆಟ್ ಬ್ಯಾಕ್ ಬಿಟ್ಟರೆ ಸಾಕು. ಉಳಿದ ಮೂರು ಕಡೆಗಳಲ್ಲಿ ಯಾವುದೇ ಸೆಟ್ ಬ್ಯಾಕ್ ಬಿಡುವ ಅನಿವಾರ್ಯತೆ ಇಲ್ಲ.

ಯಾವ ಜಾಗಕ್ಕೆ ಎಷ್ಟು ಸೆಟ್ ಬ್ಯಾಕ್ ಬಿಡಬೇಕು?

  • 600 ಚದರ ಅಡಿ ಅಂದರೆ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಕೇವಲ 0.60ಮೀ 2 ಅಡಿಗೆ ಇಳಿಕೆಯಾಗಿದೆ.
  • 600 ಚದರ ಅಡಿ ಇಂದು 1,500 ಚದರ ಅಡಿ ಜಾಗದಲ್ಲಿ ಮನೆ ನಿರ್ಮಾಣಕ್ಕೆ 0.70ಮೀ, ಅಂದರೆ 2.5 ಅಡಿಗೆ ಇಳಿಕೆಯಾಗಿದೆ.
  • 1,500 ಚದರ ಅಡಿ ಇಂದ 2,500 ಚದರ ಅಡಿ ಜಾಗದ ಮನೆಗಳಿಗೆ ಎಲ್ಲಾ ಬದಿಯಲ್ಲೂ ಕನಿಷ್ಠ 0.80ಮೀ ಅಂದರೆ 3 ಅಡಿ ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.
  • 2,500 ಚದರ ಅಡಿಯಿಂದ 40 ಸಾವಿರ ಚದರ ಅಡಿ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.

ಇದನ್ನೂ ಓದಿ: ಕಟ್ಟಡಗಳ ಸೆಟ್ ಬ್ಯಾಕ್ ನಿಯಮದಲ್ಲಿ ಬದಲಾವಣೆ: ಹೊಸ ಅಧಿಸೂಚನೆ ಮಾಹಿತಿ ಇಲ್ಲಿದೆ

ಈ ಮೊದಲು 40 ಸಾವಿರ ಚದರ ಅಡಿ ಜಾಗದಲ್ಲಿ ಮನೆ ನಿರ್ಮಾಣಕ್ಕೆ 12% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯವಾಗಿದೆ. ಆದರೆ ಇದೀಗ 4% ನಷ್ಟು ಸೆಟ್ ಬ್ಯಾಕ್ ಏರಿಯಾ ಕಡಿತಗೊಳಿಸಲಾಗಿದೆ. ಇದು ಸದ್ಯಕ್ಕೆ ನಗರದಲ್ಲಿರುವ ಎಲ್ಲಾ ಮನೆಗಳು ಮತ್ತು ಕಟ್ಟಡಗಳಿಗೆ ಅನ್ವಯವಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *