ಬೆಳಗಾವಿ, ಜನವರಿ 06: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ಲಕ್ಷ್ಮಿ ಹೆಬ್ಬಾಳ್ಕರ್) ಪುತ್ರನ ಕಾರು ಚಾಲಕನಿಗೆ ದುಷ್ಕರ್ಮಿಗಳಿಂದ ಚಾಕು ಇರುವಂತಹ (ಇರಿಯಿತು) ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಬೆಳಗುಂಡಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್(32) ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಎದೆ, ಭುಜ, ತೊಡೆ ಸೇರಿ 4 ಕಡೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೈನಿಂಗ್ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ಬಸವಂತರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಡೆದದ್ದೇನು?
ಬೆಳಗಾವಿ ತಾಲೂಕಿನ ಬೆಳಗುಂಡಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕರಾಗಿದ್ದರು. ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಕೆಳಗೆ ನಿಂತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ. ಹಲ್ಲೆ ಮಾಡಿರುವವರು ಬೆಳಗಾವಿ ತಾಲೂಕಿನ ಗೋಜಗ ಮೂಲದವರು ಎನ್ನುತ್ತಿದ್ದಾರೆ. ಚಾಕು ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದಿದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ
ಇನ್ನು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಬಸವಂತ ಕಡೋಲ್ಕರ್ ಜೀವ ಉಳಿಸಿದ್ದಾರೆ. ವೇಳೆ ರವೀಂದ್ರ ಗಡಾದಿ ಅವರು ಮನೆಗೆ ಊಟಕ್ಕೆ ಹೋದ ಘಟನೆ. ಗಲಾಟೆ ನೋಡಲು ಸ್ಥಳಕ್ಕೆ ಹೋಗಿ ದುಷ್ಕರ್ಮಿಗಳಿಂದ ಬಸವಂತನ ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ಡಿಸಿಪಿ, ಎಸ್ಸಿಪಿ ಹಾಗೂ ಸಚಿವೆ ಲಕ್ಷ್ಮೀ ಪುತ್ರ ಮೃಣಾಲ್ಗೆ ಭೇಟಿ ನೀಡಲಾಗಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ಕೃತ್ಯ ನಡೆದಿದೆ.
ಹಲ್ಲೆಗೊಳಗಾದ ಬಸವಂತ ಹೇಳಿದ್ದಿಷ್ಟು
ಹಲ್ಲೆಗೊಳಗಾದ ಬಸವಂತ ಟಿವಿ9 ಜೊತೆಗೆ ಪ್ರತಿಕ್ರಿಯಿಸಿದ್ದು, ಮೈನಿಂಗ್ ವಿಚಾರದಲ್ಲಿ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮೈನಿಂಗ್ ವಿಚಾರಕ್ಕೆ ಪದೇ ಪದೇ ಜಗಳ ತೆಗೆಯಲು. ಇಂದು ಗೋಜಗಾ ಗ್ರಾಮದ ಶಿವಾ ಪೂಜಾರಿ, ಪರಶುರಾಮ ಮತ್ತು ಮೋನಪ್ಪ ಪಾಟೀಲ್ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 5:17 pm, ಮಂಗಳವಾರ, 6 ಜನವರಿ 26