ಭೂಮಿಕಾಳ ಕಳೆದುಹೋದ ಮಗುವಿನ ಬಗ್ಗೆ ಮಿಂಚು ಹೇಳಿದ ಸತ್ಯವನ್ನು ಕೇಳಿ ಗೌತಮ್ ಭಾವುಕನಾಗುತ್ತಾನೆ. ಮತ್ತೊಂದೆಡೆ, ಜೈದೇವನ ಆದೇಶದಂತೆ ಅವನ ಪಿಎ, ಮಲ್ಲಿಗೆಯನ್ನು ಪ್ರೀತಿಯ ಬಲೆಗೆ ಬೀಳಿಸಲು ಆಕೆಯ ಸರವನ್ನು ಕದಿಯಲು ಸಂಚು ರೂಪಿಸುತ್ತಾನೆ.
ಅಮೃತಧಾರೆಯಲ್ಲಿ (Amruthadhaare) ಭೂಮಿಕಾ ಗೌತಮ್ನ ಸೇರಲು ತವಕಿಸುತ್ತಿದ್ದರೂ ಆ ಬಗ್ಗೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾಳೆ. ಆದರೆ ಎಲ್ಲವನ್ನೂ ಅರಿತಿರೋ ಆಕಾಶ್ ಮತ್ತು ಮಿಂಚು ಮಾತ್ರ ಇಬ್ಬರನ್ನೂ ಹೇಗಾದ್ರೂ ಹತ್ತಿರ ಮಾಡುವ ಸ್ಕೆಚ್ ಹಾಕಿದ್ದಾರೆ.

ಇದೀಗ ಮಿಂಚು ಅಪ್ಪನ ಬಳಿ ಬಂದು, ನಮ್ಮ ಮ್ಯಾಮ್ನ ಇನ್ನೊಂದು ಮಗು ಕಳೆದು ಹೋಗಿದ್ಯಂತೆ. ಅದಕ್ಕಾಗಿ ಅವರು ತುಂಬಾ ನೋವು ಅನುಭವಿಸುತ್ತಿದ್ದಾರಂತೆ. ಅದನ್ನು ಕೇಳಿ ನನಗೆ ಅಳುನೇ ಬಂತು ಎಂದು ಹೇಳುವ ಮೂಲಕ, ಆ ಮಗುವನ್ನು ಹುಡುಕುವ ನೆಪದಲ್ಲಿ ಅಪ್ಪ-ಅಮ್ಮನನ್ನು ಒಂದು ಮಾಡುವ ಪ್ಲ್ಯಾನ್ ಮಾಡಿದ್ದಾಳೆ.

ಇದನ್ನು ಕೇಳಿ ಗೌತಮ್ಗೆ ಕಸಿವಿಸಿಯಾಗಿದೆ. ಮಗುವನ್ನು ಕಳೆದುಕೊಂಡ ದುಃಖ ಉಮ್ಮಳಿಸಿ ಬಂದಾಗ, ಮಿಂಚು ಏನೂ ಗೊತ್ತಿಲ್ಲದವಳ ಹಾಗೆ ನಿಮಗ್ಯಾಕೆ ಬೇಜಾರಾಗ್ತಿದೆ ಪಪ್ಪಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಗೌತಮ್ ಏನಿಲ್ಲ ಏನಿಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

ಅದೇ ಇನ್ನೊಂದೆಡೆ, ಮಲ್ಲಿಗೆ ಲವ್ ಮಾಡಿ ಆಕೆಯನ್ನು ಮೋಸ ಮಾಡುವ ಟಾರ್ಗೆಟ್ ಅನ್ನು ತಮ್ಮ ಪಿಎಗೆ ನೀಡಿದ್ದಾನೆ ಜೈದೇವ. ಅದರ ಟಾಸ್ಕ್ ಭಾಗವಾಗಿ ಮಲ್ಲಿಯ ಸರವನ್ನು ಕದಿಯಲು ರೌಡಿಗೆ ಸುಪಾರಿ ಕೊಟ್ಟಿದ್ದಾನೆ.

ಅವಳ ಸರ ಕದ್ದಾಗ ತಾನು ಹೋಗಿ ಫೈಟಿಂಗ್ ಮಾಡಿ ಮಲ್ಲಿಯನ್ನು ಕಾಪಾಡುವುದು ಅವನ ಉದ್ದೇಶ. ಅದಕ್ಕಾಗಿಯೇ ರೌಡಿಯನ್ನು ಬಿಟ್ಟಿದ್ದಾನೆ.

ರೌಡಿ ಮಲ್ಲಿಯ ಹಿಂದೆ ಹಿಂದೆ ಹೋಗಿದ್ದಾನೆ. ಆದರೆ ಅವಳ ಕುತ್ತಿಗೆಯಲ್ಲಿ ಸರ ಕಾಣಿಸದೇ ತಲೆ ಕೆಡಿಸಿಕೊಂಡಿದ್ದಾನೆ ಈ ರೌಡಿ. ಮುಂದೇನಾಗತ್ತೆ? ಮೊಬೈಲ್ ಕದ್ದು ಹೋಗ್ತಾನಾ ಹೇಗೆ?ಮಲ್ಲಿಗೆ ಲವ್ ಆಗತ್ತಾ, ಗೌತಮ್ ಮಗುವನ್ನು ಹುಡುಕಲು ಭೂಮಿಕಾ ಜೊತೆಯಾಗ್ತಾನಾ ಎನ್ನೋದು ಈಗಿರೋ ಪ್ರಶ್ನೆ.

Source link
Amruthadhaare: ಅಪ್ಪನ ತಲೆಗೆ ಹುಳು ಬಿಟ್ಟ ಮಿಂಚು- ಮಲ್ಲಿ ಸರ ಕದಿಯಲು ರೌಡಿ ಬಿಟ್ಟ ಕಿಲಾಡಿ ಪಿಎ!