ಬೆಂಗಳೂರು, ಜನವರಿ 6: ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ನಿರ್ಮಾಣವಾಗುತ್ತಿರುವ ಕಟ್ಟಡವಿದ್ದರೆ ಅಥವಾ ಹೊಸದಾಗಿ ಕಟ್ಟಿದ ಮನೆಯಿದ್ದರೆ ನೀವು ಈ ದೊಡ್ಡ ಕಣ್ಣುಗಳ ಮಹಿಳೆಯ ಭಯಭೀತಗೊಳಿಸುವ ಫೋಟೋವನ್ನು ಖಂಡಿತವಾಗಿ ನೋಡುತ್ತೀರಿ. ನೀವು ಬೆಂಗಳೂರಿನಲ್ಲಿ (ಬೆಂಗಳೂರು) ಇರುವವರಾದರೆ ಈ ಫೋಟೋ ನೋಡದೆ ಇರಲು ಸಾಧ್ಯವೇ ಇಲ್ಲ. ಸೀರೆಯುಟ್ಟ ಮಹಿಳೆ ದೊಡ್ಡ ಬಟ್ಟಲುಗಳನ್ನು ಬಿಟ್ಟುಕೊಂಡು ಹೆದರಿಸುತ್ತಿರುವ ಫೋಟೋ ಇದೆ. ಈ ಫೋಟೋದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.
ಸಾಮಾನ್ಯವಾಗಿ, ಯಾವುದಾದರೂ ಹೊಸ ಕಟ್ಟಡ ಕಟ್ಟುವಾಗ, ಅಥವಾ ಕಟ್ಟಿದ ಮನೆಯ ಗೃಹಪ್ರವೇಶಕ್ಕೂ ಮೊದಲು ಆ ಮನೆಗೆ ದೃಷ್ಟಿಯಾಗಬಾರದು ಎಂದು ವಿಕಾರವಾದ ಯಾವುದಾದರೂ ಮುಖವಾಡ ತಂದು ನೇತುಹಾಕುವುದು ವಾಡಿಕೆ. ಆದರೆ, ಆ ಮುಖವಾಡದ ಜಾಗವನ್ನು ಈಗ ಈ ಮಹಿಳೆ ಆವರಿಸಿಕೊಂಡಿದೆ.
ನಾನು ಈ ಮಹಿಳೆಯನ್ನು ಬೆಂಗಳೂರಿನಿಂದ ಹೊರಗೆ ಕರ್ನಾಟಕದ ಎಲ್ಲೆಡೆ ನೋಡುತ್ತೇನೆ, ಅಲ್ಲಿ ನಿರ್ಮಾಣ ನಡೆಯುತ್ತಿದೆ. ಚರ್ಚೆಗಳಿಗಾಗಿ ಪರಿಶೀಲಿಸಲು ನಾನು ಗೂಗಲ್ ಲೆನ್ಸ್ ಅನ್ನು ಪ್ರಯತ್ನಿಸಿದೆ ಆದರೆ ಯಾವುದೇ ವಿವರಗಳನ್ನು ಕಂಡುಹಿಡಿಯಲಾಗಲಿಲ್ಲ. ಅವಳು ಯಾರು? pic.twitter.com/RAgMDXXJMt
– unc ಯುನಿಟೆಕಿ (@unitechy) ಜನವರಿ 5, 2026
ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಅಪಾರ್ಟ್ ಮೆಂಟ್ ನೊಳಗೆ ಸಿಲುಕಿದ್ದರೆ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್
ಮಹಾರಾಷ್ಟ್ರದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಹಲವು ಮನೆಗಳ ಎದುರು ಈ ಮಹಿಳೆಯ ಫೋಟೋ ನೋಡಿದ್ದರು. ಯಾರೀಕೆ? ಎಂದು ತಲೆಕೆಡಿಸಿಕೊಂಡಿದ್ದರು. ಗೂಗಲ್ ಲೆನ್ಸ್ ನಲ್ಲಿ ಈ ಫೋಟೋ ಹಾಕಿ ಹುಡುಕಿದರೂ ಮಾಹಿತಿ ಸಿಗಲಿಲ್ಲ ಎಂದು ಮಹಿಳೆ ಫೇಸ್ ಬುಕ್ ನಲ್ಲಿ ಬರೆದಿದ್ದರು. ಈ ಪೋಸ್ಟ್ ಕೂಡ ಎಲ್ಲರ ಗಮನ ಸೆಳೆಯಿತು. ಇದು 3.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಭಾರೀ ಚರ್ಚೆಗೆ ನಾಂದಿ ಹಾಡಿತು.
ಈ ಮಹಿಳೆ ನಿಹಾರಿಕಾ ರಾವ್, ಯೂ ಟ್ಯೂಬರ್. ಕರ್ನಾಟಕದ ನೂರಾರು ಜನರು ತಮ್ಮ ಅಂಗಡಿಗಳು, ಮನೆಗಳು, ಜಮೀನುಗಳ ಮುಂದೆ ನಕಾರಾತ್ಮಕತೆಯನ್ನು (ದೃಷ್ಟಿ) ತೊಡೆದುಹಾಕಲು ಅವರ ಫೋಟೋವನ್ನು ಹಾಕುತ್ತಿದ್ದಾರೆ.
ಇದು ಸ್ತ್ರೀವಾದದ ನಿಜವಾದ ಶಕ್ತಿ pic.twitter.com/xsPRbFX7OD
— 𝕲𝖆𝖓𝖊𝖘𝖍 * (@ggganeshh) ಮೇ 16, 2024
ಅನೇಕ ಬಳಕೆದಾರರು ಈ ಫೋಟೋ ಹಾಕುವ ಕಾರಣವನ್ನು ವಿವರಿಸಿದ್ದಾರೆ. ಕೆಟ್ಟ ದೃಷ್ಟಿ ತಗುಲದಂತೆ ಈ ರೀತಿಯ ಫೋಟೋಗಳನ್ನು ಹಾಕಬೇಡಿ. ಇನ್ನು ಕೆಲವರು ಈ ರೀತಿ ಮಹಿಳೆಯ ಫೋಟೋ ಹಾಕಿದ್ದಕ್ಕೆ ಕೋಪವನ್ನೂ ಹೊರಹಾಕಿದ್ದಾರೆ. ಮೀಮ್‌ಗಳಿಂದ ಪ್ರಭಾವಿತರಾಗಿ ರೀಲ್ಸ್ ಮಾಡುವ ಮಹಿಳೆಯ ಫೋಟೋವನ್ನು ಈ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
Nazar kavach ಆದರೆ ಜನರು ಇದನ್ನು ಬಳಸುತ್ತಿರುವುದು ನಿಜಕ್ಕೂ ವಿಚಿತ್ರವಾಗಿದೆ. ಇದು ಹೆಚ್ಚಾಗಿ ಕೆಂಪು ನಾಲಿಗೆಯೊಂದಿಗೆ ದೆವ್ವದ ಆಕಾರದ ಮುಖವಾಗಿದೆ. ಮೀಮ್ ಟ್ರೆಂಡ್ ಆಗಿರಬಹುದು
— ಅಕ್ಷಯ್ ಜಿ ಜೈನ್ (@Ajain112) ಜನವರಿ 5, 2026
ಇದನ್ನೂ ಓದಿ: ವಿಡಿಯೋ: ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಬಾಟ್ ಪ್ರಕಾರ, ಈ ಫೋಟೋದಲ್ಲಿರುವ ಮಹಿಳೆ ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್. ಅವರ ಈ ವಿಚಿತ್ರವಾದ ಮುಖಭಾವವು 2023ರ ವೈರಲ್ ವೀಡಿಯೊ ಕ್ಲಿಪ್ನಿಂದ ಹುಟ್ಟಿಕೊಂಡಿತು. ಅದು ನಂತರ ಜನಪ್ರಿಯ ಮೀಮ್ ಆಗಿ ವೈರಲ್ ಆಗಿದೆ. ಕ್ರಮೇಣ ಆಕೆಯ ಆ ಫೋಟೋವನ್ನು ದೃಷ್ಟಿಗೊಂಬೆಯ ಬದಲಿಗೆ ತಮ್ಮ ಮನೆಯೆದುರು ಹಾಕಲಾರಂಭಿಸಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ