
ಯಾವುದೇ ಹೋಟೆಲ್, ರೆಸ್ಟೋರೆಂಟ್ ಅಥವಾ ನಿಮ್ಮ ಸ್ವಂತ ಮನೆಯ ಅಡುಗೆಮನೆಯಲ್ಲಿ ಹೆಚ್ಚು ಬಳಸುವ ತರಕಾರಿ ಅಂದ್ರೆ ಅದು ಟೊಮೆಟೊ. ಪಲ್ಯ, ಸಾಂಬಾರ್, ಚಟ್ನಿ, ಪುಲಾವ್, ಬಿರಿಯಾನಿ, ವೆಜ್ ನಾನ್ ವೆಜ್ ಏನೇ ಮಾಡಿದರೂ ಟೊಮೆಟೊ ಬೇಕೇ ಬೇಕು. ಟೊಮೆಟೊಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಬಣ್ಣ ಮತ್ತು ಪೋಷಣೆಯನ್ನು ಸಹ ನೀಡುತ್ತವೆ. ಆದಾಗ್ಯೂ, ಟೊಮೆಟೊಗಳು ಬೇಗನೆ ಹಾಳಾಗುವ ತರಕಾರಿ. ತೇವಾಂಶ ಮತ್ತು ಶೀತ, ವಿಶೇಷವಾಗಿ ಚಳಿಗಾಲದಲ್ಲಿ, ಟೊಮೆಟೊಗಳು ಮೃದುವಾಗಲು ಮತ್ತು ಬೇಗನೆ ಕೊಳೆಯಲು ಕಾರಣವಾಗಬಹುದು. ಎರಡು ಮೂರು ದಿನಗಳಲ್ಲಿ ಟೊಮೆಟೊಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಹಾಗಿದ್ರೆ ಟೊಮೆಟೊ ಹೆಚ್ಚು ಕಾಲ ಉಳಿಯುವಂತೆ ಮಾಡೋದು ಹೇಗೆ?