ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಖತರ್ನಾಕ್ ಮಹಿಳೆಯರು!

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಖತರ್ನಾಕ್ ಮಹಿಳೆಯರು!


ಪ್ರಯಾಗ್ರಾಜ್, ಜನವರಿ 6: ಉತ್ತರ ಪ್ರದೇಶದ ಪ್ರಯಾಗ್ರಾಜ್‌ನಲ್ಲಿ ನಡೆದ ಘಟನೆ (ಆಘಾತಕಾರಿ ಸುದ್ದಿ) ಬೆಳಕಿಗೆ ಬಂದಿದೆ. ಕಲ್ಯಾಣ್ ಜುವೆಲ್ಲರ್ಸ್ ಅಂಗಡಿಯಿಂದ ಮೂವರು ಮಹಿಳೆಯರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಈ ಕಳ್ಳತನವು 14 ನಿಮಿಷಗಳ ಕಾಲ. ಆ ಮಹಿಳೆಯರು ಯಾರಿಗೂ ಗೊತ್ತಾಗದಂತೆಯೇ ಕಳ್ಳತನ ಮಾಡಿದ್ದರು. ಆದರೆ, ಸಿಸಿಟಿವಿಯಲ್ಲಿ ಅವರ ಕಳ್ಳತನ ಸೆರೆಯಾಗಿದೆ.

ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ ಗಾಜಿನ ಕೌಂಟರ್ ಎದುರು ಕುಳಿತಿದ್ದ ಮಹಿಳೆಯರು ಚಿನ್ನದ ಕಿವಿಯೋಲೆಗಳನ್ನು ನೋಡುತ್ತಿದ್ದರು. ಆಗ ಒಬ್ಬ ಮಹಿಳೆ ಸೇಲ್ಸ್ ನವರ ಗಮನವನ್ನು ಬೇರೆಡೆಗೆ ಸೆಳೆಯುತ್ತಾಳೆ. ಆಗ ಒಬ್ಬಳು ಮಹಿಳೆ ಗಾಜಿನ ಕೌಂಟರ್ ಒಳಗಿನಿಂದ ಆಭರಣಗಳ ಪೆಟ್ಟಿಗೆಯನ್ನು ತೆಗೆದುಕೊಳ್ಳುತ್ತಾಳೆ. ಅವಳು ಅದನ್ನು ತನ್ನ ಶಾಲಿನೊಳಗೆ ಮರೆಮಾಡುತ್ತಾಳೆ. ಈ ವಿಷಯ ಅಲ್ಲಿದ್ದವರ ಯಾರ ಗಮನಕ್ಕೂ ಬರಲೇ ಇಲ್ಲ. ಆದರೆ, ಒಂದು ಟ್ರೇ ಫುಲ್ ಆಭರಣವನ್ನು ನಾಪತ್ತೆಯಾಗಿ ಸಿಸಿಟಿವಿ ಪರಿಶೀಲಿಸಿದಾಗ ಈ ಕಳ್ಳತನ ಬಯಲಾಗಿದೆ. ಆ ಮಹಿಳೆಯರನ್ನು ಇನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *