ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್‌ ಟಿಕೆಟ್ ಬೆಲೆಯಲ್ಲಿ ಇಳಿಕೆ: ಹೊಸ ಪ್ರಯಾಣ ದರದ ವಿವರ ಇಲ್ಲಿದೆ | Ksrtc Rajahamsa Non Ac Sleeper Fares Reduced Mrq

ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್‌ ಟಿಕೆಟ್ ಬೆಲೆಯಲ್ಲಿ ಇಳಿಕೆ: ಹೊಸ ಪ್ರಯಾಣ ದರದ ವಿವರ ಇಲ್ಲಿದೆ | Ksrtc Rajahamsa Non Ac Sleeper Fares Reduced Mrq



ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್‌ ಟಿಕೆಟ್ ಬೆಲೆಯಲ್ಲಿ ಇಳಿಕೆ: ಹೊಸ ಪ್ರಯಾಣ ದರದ ವಿವರ ಇಲ್ಲಿದೆ | Ksrtc Rajahamsa Non Ac Sleeper Fares Reduced Mrq

ಸಾರ್ವಜನಿಕರ ಅನುಕೂಲಕ್ಕಾಗಿ ಕ.ರಾ.ರ.ಸಾ. ನಿಗಮವು ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್ ಬಸ್‌ಗಳ ದರವನ್ನು ಕಡಿಮೆ ಮಾಡಿದೆ. ಮಡಿಕೇರಿ, ಕುಶಾಲನಗರ, ವಿರಾಜಪೇಟೆಮುಂತಾದ ಸ್ಥಳಗಳಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಸಾರಿಗೆಗಳ ಮೇಲೆ ಈ ದರ ಇಳಿಕೆ ಅನ್ವಯವಾಗಲಿದೆ.

ಮಡಿಕೇರಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜ. 5ರಿಂದ ಜಾರಿಗೆ ಬರುವಂತೆ ಕ.ರಾ.ರ.ಸಾ. ನಿಗಮ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆಯಿಂದ ಬೆಂಗಳೂರು ಹಾಗೂ ಮೈಸೂರಿಗೆ ಕಾರ್ಯಾಚರಿಸುವ ರಾಜಹಂಸ ಹಾಗೂ ನಾನ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ ಎಂದು ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ತಿಳಿಸಿದ್ದಾರೆ.

ಪ್ರಯಾಣ ದರ ವಿವರ:

ಕುಶಾಲನಗರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ 780 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ 700 ರು., ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 680 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ 550 ರು, ಕುಶಾಲನಗರ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 620 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ 500 ರು. ಆಗಿದೆ

ವಿರಾಜಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 620 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ 550 ರು., ಗೋಣಿಕೊಪ್ಪ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 620 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ 550 ರು., ಸೋಮವಾರಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 630 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ 550 ರು., ಮಡಿಕೇರಿ-ಮೈಸೂರು ಮಾರ್ಗ ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 570 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ 450 ರು., ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ 430 ರು., ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ 280 ರು. ಆಗಿದೆ ಎಂದು ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ವಿನಂತಿಸಿದ್ದಾರೆ.



Source link

Leave a Reply

Your email address will not be published. Required fields are marked *