Headlines

ಗವಿಮಠದ ಜಾತ್ರೆಯಲ್ಲಿ ಭಕ್ತ ಸಾಗರ: ಜನರ ನಿಯಂತ್ರಣಕ್ಕೆ ಖುದ್ದು ಅಖಾಡಕ್ಕಿಳಿದ ಎಸ್ಪಿ

ಗವಿಮಠದ ಜಾತ್ರೆಯಲ್ಲಿ ಭಕ್ತ ಸಾಗರ: ಜನರ ನಿಯಂತ್ರಣಕ್ಕೆ ಖುದ್ದು ಅಖಾಡಕ್ಕಿಳಿದ ಎಸ್ಪಿ


ಕೊಪ್ಪಳ, ಜನವರಿ 07: ಗವಿಮಠದ ಜಾತ್ರೆಗೆ ಈ ಬಾರಿ ಭಕ್ತರ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗಿ ಆಗಮಿಸಿದ ಪರಿಣಾಮ, ದಾಸೋಹದಲ್ಲಿ ನೂಕು ನುಗ್ಗಲು ಕಂಡುಬಂತು. ಇದನ್ನು ಗಮನಿಸಿದ ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಅಖಾಡಕ್ಕಿಳಿದು ಗಮನ ಸೆಳೆದರು. ಚೇರ್ ಮೇಲೆ ನಿಂತುಕೊಂಡು ಭಕ್ತರನ್ನ ಡಾ. ರಾಮ್ ಎಲ್. ಅರಸಿದ್ದಿ ನಿಯಂತ್ರಿಸಿದ್ದು, ಅಲ್ಲೆ ಹಲವು ಪ್ರಮುಖ ಕಡತಗಳಿಗೆ ಸಹಿ ಹಾಕಿದ ದೃಶ್ಯಗಳು ಕೂಡ ಕಂಡುಬಂದಿವೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ಸಾಲಾಗಿ ನಿಲ್ಲಿಸಿ, ಸರಾಗವಾಗಿ ದಾಸೋಹ ಮತ್ತು ಪ್ರಸಾದ ವಿತರಣೆಗೆ ಅನುಕೂಲ ಮಾಡಿಕೊಟ್ಟರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *