Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ

Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಒಗಟಿನ ಆಟಗಳೇ ಹಾಗೆ, ಮೆದುಳಿಗೆ ಕೆಲಸ ನೀಡುವುದರೊಂದಿಗೆ ನಿಮ್ಮ ಟೈಮ್ ಪಾಸ್ ಮಾಡುತ್ತದೆ. ಇಂತಹ ಮೋಜಿನ ಆಟಗಳನ್ನು ಆಡುತ್ತಿರುವ ಮಜಾನೇ ಬೇರೆ. ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಇಲ್ಯೂಷನ್) ಸೇರಿದಂತೆ ಒಗಟಿನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಟ್ರಿಕ್ಕಿ ಚಿತ್ರವೊಂದಿದೆ. ಈ ಚಿತ್ರದಲ್ಲಿರುವ ಮುಖಗಳನ್ನು ಹುಡುಕುವ ಸವಾಲುಗಳು. ನಿಖರವಾದ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರವು ನಿಮ್ಮ ಕಣ್ಣಿಗೆ ಕಾಣುವಂತೆ ಕಾಣಿಸುತ್ತದೆ. ಈ ಚಿತ್ರದಲ್ಲಿ, ಒಬ್ಬ ಮಹಿಳೆ ಹೂದಾನಿಯಲ್ಲಿ ಹೂವುಗಳನ್ನು ಹಾಕುತ್ತಿದ್ದಾಳೆ. ಈ ಮಹಿಳೆಯನ್ನು ಮಾತ್ರ ನೋಡುತ್ತಾರೆ. ಆದರೆ, ಈ ಚಿತ್ರದಲ್ಲಿ ಇತರ ಮುಖಗಳಿವೆ. ಹೀಗಾಗಿ ನೀವು ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಗುರುತಿಸಬಲ್ಲಿರಿ. 30 ಸೆಕೆಂಡುಗಳಲ್ಲಿ ಎಷ್ಟು ಮುಖಗಳಿವೆ ಎಂದು ಹೇಳಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ:ನೀವು ಜಾಣರೇ, ಈ ಮೂವರಲ್ಲಿ ಬಾಸ್ ಯಾರೆಂದು ಗುರುತಿಸಿ

ನಿಖರ ಉತ್ತರ ಹೇಳಲು ಸಾಧ್ಯವಾಯಿತೇ?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದು ಮಹಿಳೆ ಮಾತ್ರ. ಸ್ವಲ್ಪ ತಾಳ್ಮೆಯಿಂದ ಗಮನಹರಿಸಿ ಮುಖಗಳನ್ನು ಗುರುತಿಸಲು ಪ್ರಯತ್ನಿಸಿ. ಒಗಟು ಬಿಡಿಸಲು ಸಾಧ್ಯವಾಗುತ್ತಿಲ್ಲವೇ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಾವೇ ನಿಮಗೆ ಈ ಚಿತ್ರದಲ್ಲಿರುವ ಮುಖಗಳೆಷ್ಟು ಎಂದು ಹೇಳುತ್ತೇವೆ. ಈ ಚಿತ್ರದಲ್ಲಿ ಒಟ್ಟು ಮೂರು ಮುಖಗಳಿವೆ. ಒಂದು ಮಹಿಳೆಯ ಮುಖ. ಹಾಗೂ ಈ ಹೂದಾನಿಯ ಎರಡೂ ಬದಿಗಳಲ್ಲಿ ಎರಡು ಮುಖಗಳಿವೆ. ಒಟ್ಟು ಮೂರು ಮುಖಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:27 am, ಬುಧವಾರ, 7 ಜನವರಿ 26



Source link

Leave a Reply

Your email address will not be published. Required fields are marked *