ಇಂಡಿಯನ್ ಸೂಪರ್ ಲೀಗ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್; ಎಲ್ಲಾ 14 ತಂಡಗಳು ಭಾಗಿ!

ಇಂಡಿಯನ್ ಸೂಪರ್ ಲೀಗ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್; ಎಲ್ಲಾ 14 ತಂಡಗಳು ಭಾಗಿ!

ಇಂಡಿಯನ್ ಸೂಪರ್ ಲೀಗ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್; ಎಲ್ಲಾ 14 ತಂಡಗಳು ಭಾಗಿ!

ನವದೆಹಲಿ: 12ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ವಾಣಿಜ್ಯ ಪಾಲುದಾರರ ಕೊರತೆಯಿಂದ ಹಲವು ದಿನಗಳಿಂದ ಸ್ಥಗಿತವಾಗಿದ್ದ ಇಂಡಿಯನ್ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿ ಕೊನೆಗೂ ಕೇಂದ್ರ ಸರ್ಕಾರ ಮಧ್ಯಸ್ಥಿತಿಯೊಂದಿಗೆ ಆರಂಭಗೊಳ್ಳುತ್ತಿದೆ.

ಫೆ.14ರಿಂದ 12ನೇ ಆವೃತ್ತಿ ಶುರುವಾಗಲಿದೆ. ಎಲ್ಲಾ 14 ತಂಡಗಳು ಪಾಲ್ಗೊಳ್ಳಲಿವೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಮಂಗಳವಾರ ಘೋಷಿಸಿದರು.

‘ಐಎಸ್‌ಎಲ್‌ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇಂದು ಸರ್ಕಾರ, ಫುಟ್ಬಾಲ್‌ ಫೆಡರೇಶನ್‌ ಹಾಗೂ ಎಲ್ಲಾ 14 ಕ್ಲಬ್‌ಗಳು ಸೇರಿ ಸಭೆ ನಡೆಸಿದ್ದು, ಫೆ.14ರಿಂದ ಟೂರ್ನಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಮಾಂಡವೀಯ ತಿಳಿಸಿದರು.

ಟೂರ್ನಿಯಲ್ಲಿ ಒಟ್ಟು 91 ಪಂದ್ಯಗಳು ನಡೆಯಲಿದ್ದು, ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಫುಟ್ಬಾಲ್‌ ಫೆಡರೇಶನ್‌ ತಿಳಿಸಿದೆ.

ಟೂರ್ನಿ ಆಯೋಜನೆಗೆ ₹25 ಕೋಟಿ ರು. ಅಗತ್ಯವಿದ್ದು, ಫುಟ್ಬಾಲ್‌ ಫೆಡರೇಶನ್‌ ₹14 ಕೋಟಿ ಒದಗಿಸಲಿದೆ. ಉಳಿದ ಹಣವನ್ನು ಕ್ಲಬ್‌ಗಳು ಹೊಂದಿಸಬೇಕು ಎಂದು ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ.

Source link

Leave a Reply

Your email address will not be published. Required fields are marked *