ಅಮ್ಮ ಪಕ್ಕದ ಮನೆಯವರೊಂದಿಗೆ ಜಗಳ ಮಾಡಿದ್ದಕ್ಕೆ, 6 ವರ್ಷದ ಮಗು ಕೊಲೆಗೈದು ಚರಂಡಿಗೆ ಎಸೆದ ದುರುಳ! | Whitefield Mother Clash Her 6 Year Old Daughter Murder Body Found In Bag Sat

ಅಮ್ಮ ಪಕ್ಕದ ಮನೆಯವರೊಂದಿಗೆ ಜಗಳ ಮಾಡಿದ್ದಕ್ಕೆ, 6 ವರ್ಷದ ಮಗು ಕೊಲೆಗೈದು ಚರಂಡಿಗೆ ಎಸೆದ ದುರುಳ! | Whitefield Mother Clash Her 6 Year Old Daughter Murder Body Found In Bag Sat



ಅಮ್ಮ ಪಕ್ಕದ ಮನೆಯವರೊಂದಿಗೆ ಜಗಳ ಮಾಡಿದ್ದಕ್ಕೆ, 6 ವರ್ಷದ ಮಗು ಕೊಲೆಗೈದು ಚರಂಡಿಗೆ ಎಸೆದ ದುರುಳ! | Whitefield Mother Clash Her 6 Year Old Daughter Murder Body Found In Bag Sat

ಬೆಂಗಳೂರಿನ ವೈಟ್‌ಫೀಲ್ಡ್ ಬಳಿ, ನೆರೆಮನೆಯವರ ನಡುವಿನ ಜಗಳವು 6 ವರ್ಷದ ಬಾಲಕಿಯ ಬರ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ. ತಾಯಿಯ ಮೇಲಿನ ಸೇಡಿಗಾಗಿ ಆರೋಪಿಯು ಮಗುವನ್ನು ಕೊಂದು, ಶವವನ್ನು ಬ್ಯಾಗ್‌ನಲ್ಲಿ ತುಂಬಿ ಚರಂಡಿಗೆ ಎಸೆದಿದ್ದು, ಪೊಲೀಸರು ಆರೋಪಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜ.07): ಅಕ್ಕ-ಪಕ್ಕದ ಮನೆಯವರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ನಡೆದಿದ್ದು, ಪಕ್ಕದ ಮನೆಯ ದುರುಳನೊಬ್ಬ 6 ವರ್ಷದ ಹಸುಳೆಯ ಪ್ರಾಣವನ್ನೇ ಬಲಿಪಡೆದಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್ ಸಮೀಪದ ನಲ್ಲೂರಳ್ಳಿಯಲ್ಲಿ ಸಂಭವಿಸಿದೆ. ನೆರೆಹೊರೆಯವರ ನಡುವಿನ ದ್ವೇಷಕ್ಕೆ ಬಲಿಯಾದ ಬಾಲಕಿಯನ್ನು ಪಶ್ಚಿಮ ಬಂಗಾಳ ಮೂಲದ ಶಹಜಾನ್ ಕತೂನ್ (6) ಎಂದು ಗುರುತಿಸಲಾಗಿದೆ.

ಸೇಡಿನ ಕಿಚ್ಚಿಗೆ ಬಲಿಯಾದ ಮಗು

ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಕುಟುಂಬವೊಂದು ನಲ್ಲೂರಳ್ಳಿಯಲ್ಲಿ ವಾಸವಾಗಿತ್ತು. ಈ ಕುಟುಂಬಕ್ಕೂ ಹಾಗೂ ಅಕ್ಕಪಕ್ಕದ ಮನೆಯವರಿಗೂ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ನಡೆದ ಕಿತ್ತಾಟದ ನಂತರ, ಮಗುವಿನ ತಾಯಿಗೆ ‘ಬುದ್ಧಿ ಕಲಿಸಬೇಕು’ ಎಂದು ಪಣತೊಟ್ಟ ಆರೋಪಿ, ಈ ಅಮಾಯಕ ಮಗುವನ್ನೇ ತನ್ನ ಸೇಡಿಗೆ ದಾಳವನ್ನಾಗಿ ಬಳಸಿಕೊಂಡಿದ್ದಾನೆ.

ಬ್ಯಾಗ್‌ನಲ್ಲಿ ಶವವಿಟ್ಟು ಚರಂಡಿಗೆ ಎಸೆದ ಆರೋಪಿ

ಕೃತ್ಯ ಎಸಗಲು ಯೋಜಿಸಿದ ಆರೋಪಿ, ಬಾಲಕಿ ಶಹಜಾನ್ ಕತೂನ್ ಒಬ್ಬಳೇ ಇದ್ದ ಸಮಯ ನೋಡಿ ಹೊಂಚು ಹಾಕಿದ್ದನು. ಆಕೆಯನ್ನು ಅಪಹರಿಸಿ ಕುತ್ತಿಗೆ ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಮಗುವಿನ ಶವವನ್ನು ಬ್ಯಾಗ್ ಒಂದರಲ್ಲಿ ಹತ್ತಿಕ್ಕಿ ತುಂಬಿ, ಯಾರಿಗೂ ಅನುಮಾನ ಬರದಂತೆ ಸಮೀಪದ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ.

ಪೊಲೀಸ್ ತನಿಖೆ

ಇತ್ತ ಮಗು ಕಾಣೆಯಾದ ಬಗ್ಗೆ ಪೋಷಕರು ಗಾಬರಿಗೊಂಡು ಹುಡುಕಾಡಿದಾಗ ಮಗುವಿನ ಶವ ಚರಂಡಿಯಲ್ಲಿ ಪತ್ತೆಯಾಗಿದೆ. ಕೂಡಲೇ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಮಗುವಿನ ತಾಯಿಯ ಜೊತೆ ಜಗಳವಾಡಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ತಾಯಿ ಯಾರ ಜೊತೆ ಜಗಳವಾಡಿದ್ದಾಳೆ ಎಂಬ ಅರಿವಿಲ್ಲದ ಹಸುಳೆಯನ್ನು ಇಷ್ಟು ಕ್ರೂರವಾಗಿ ಕೊಂದ ಆರೋಪಿಗಾಗಿ ವೈಟ್‌ಫೀಲ್ಡ್ ಪೊಲೀಸರು ಬಲೆ ಬೀಸಿದ್ದಾರೆ. ಸೇಡಿಗಾಗಿ ಹಸುಳೆಯ ಕೊಲೆ ಮಾಡಿರುವುದು ಇಡೀ ಬಡಾವಣೆಯನ್ನು ಬೆಚ್ಚಿಬೀಳಿಸಿದೆ.



Source link

Leave a Reply

Your email address will not be published. Required fields are marked *