ಮನೆಯಲ್ಲಿ ಅಜ್ಜ ಅಜ್ಜಿಯಿಂದರೆ (ಅಜ್ಜಿಯರು) ಅವರಿಗೆ ಮೊಬೈಲ್ ಬಳಕೆ ಅಷ್ಟಾಗಿ ತಿಳಿದಿರುವುದಿಲ್ಲ. ಯಾರದರೂ ಕಾಲ್ ಮಾಡಿದರೆ ಮೊಬೈಲ್ ಹಿಡಿದುಕೊಂಡು ನಿಂತು ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಮೊಮ್ಮಗಳು (ಮೊಮ್ಮಗಳು) ತನ್ನ ಅಜ್ಜಿಗೆ ಸ್ಮಾರ್ಟ್ ಪೋನ್‌ನಲ್ಲಿ ವಿಡಿಯೋ ಕಾಲ್ ಮಾಡುವುದು ಹೇಗೆಂದು ಕಲಿಸಿ ಕೊಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ಕಲಿಕೆಯ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ.
ಚಟೋರಿ ಅಮ್ಮ (chatori _ amma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇದೆ. ಕಲಿಕೆಗೆ ಯಾವುದೇ ವಯಸ್ಸಿಲ್ಲ. ಅವಳು ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ” ಎಂಬ ಕ್ಲಿಪಿಂಗ್‌ನಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ:ಅಜ್ಜಿಯ ಮುಂದೆ ಪ್ರತ್ಯಕ್ಷನಾಗಿ ಸರ್ಪ್ರೈಸ್ ನೀಡಿದ ಮೊಮ್ಮಗ
ಈ ವಿಡಿಯೋ ಇದುವರೆಗೆ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳಿವೆ. ಒಬ್ಬ ಬಳಕೆದಾರ ಇಂತಹ ತಾಳ್ಮೆ ಎಲ್ಲರಲ್ಲೂ ಇರಲ್ಲ. ಇಂತಹ ಮೊಮ್ಮಗಳನ್ನು ಪಡೆದ ನೀವೇ ಧನ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಶುದ್ಧ ಪ್ರೀತಿ ಇದೆ. ಇತರರು, ಅಜ್ಜಿ ಮೊಮ್ಮಗಳ ಬಾಂಧವ್ಯ ಸೊಗಸಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ