‘Shravani Subramanya’ ಧಾರಾವಾಹಿಯಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಕೀರ್ತಿ ವೆಂಕಟೇಶ್ ವೆಕೇಶನ್ ಮೂಡಲ್ಲಿದ್ದಾರೆ. ದುಬೈನಲ್ಲಿರುವ ಬೆಡಗಿ, ಟೂ ಪೀಸ್ ಧರಿಸಿ, ಮೈ ಚಳಿ ಬಿಟ್ಟು ಬೀಚ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ಶ್ರೀವಲ್ಲಿ ಪಾತ್ರ ಹಲವು ಜನರಿಗೆ ಫೇವರಿಟ್, ಆರಂಭದಲ್ಲಿ ಪ್ರೇಮಿಯಾಗಿ, ಬಳಿಕ ವಿಲನ್ ಆಗಿ, ಈಗ ಲವ್ ಗುರುವಾಗಿರುವ ಶ್ರೀವಲ್ಲಿ ಎಲ್ಲರಿಗೂ ಇಷ್ಟ

ಶ್ರೀವಲ್ಲಿ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವ ನಟಿ ಕೀರ್ತಿ ವೆಂಕಟೇಶ್. ಶ್ರೀವಲ್ಲಿಯ ಲಂಗ, ದಾವಣಿ ಲುಕ್, ಆ ಸ್ಮೈಲ್, ಸ್ಟೈಲ್, ಎಲ್ಲವೂ ಜನರಿಗೆ ಸಖತ್ ಇಷ್ಟ. ಆದರೆ ಈಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ.

ಹೌದು, ಶ್ರೀವಲ್ಲಿ ಆಲಿಯಾಸ್ ಕೀರ್ತಿ, ಸೀರಿಯಲ್ ನಲ್ಲಿ ಮಾತ್ರ ಲಂಗ ದಾವಣಿ ಧರಿಸೋದು, ನಿಜ ಜೀವನದಲ್ಲಿ ಸಖತ್ ಬೋಲ್ಡ್ ಆಗಿದ್ದಾರೆ ನಟಿ. ಇದೀಗ ದುಬೈ ಬೀಚ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಕೀರ್ತಿ ಮೈ ಚಳಿ ಬಿಟ್ಟು, ತುಂಡುಡುಗೆ ತೊಟ್ಟು, ದುಬೈನ ಲಾ ಮೈರ್ ಬೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ನಟಿಯ ಲುಕ್ ಸಖತ್ ವೈರಲ್ ಆಗಿದೆ.

ಕೀರ್ತಿ, ಬಮ್ ಶಾರ್ಟ್ಸ್, ವೂಲನ್ ಕ್ರಾಪ್ ಟಾಪ್ ಧರಿಸಿದ್ದು, ನೀರಿನ ಅಲೆಗಳ ಮಧ್ಯೆ ನಿಂತು ನೀರಾಟವಾಡುತ್ತಾ ಪೋಸ್ ಕೊಟ್ಟಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಅದೇ ಲಂಗ ದಾವಣಿಯಲ್ಲಿ ನೋಡಿದ್ದ ಬೆಡಗಿಯ ಈ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಶಾಕ್ ಆಗಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿ ಫೈರ್ ಇಮೋಜಿ ಹಾಕಿದ್ದಾರೆ.

ಕೀರ್ತಿ ವೆಂಕಟೇಶ್ ಸೀರಿಯಲ್ ಶೂಟಿಂಗ್ ಗೆ ಕೊಂಚ ಬ್ರೇಕ್ ಕೊಟ್ಟು, ಸದ್ಯ ವೆಕೇಶನ್ ಮೂಡ್ ನಲ್ಲಿದ್ದಾರೆ. ದುಬೈನ ಸುಂದರವಾದ ತಾಣಗಳಿಗೆ ಭೇಟಿ ನೀಡಿ ನಟಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಬೀಚ್ ಮಾತ್ರವಲ್ಲ ದುಬೈ ಡೆಸರ್ಟ್ ನಲ್ಲಿ ಸಫಾರಿ ಮಾಡುತ್ತಾ, ರಣಹದ್ದುವನ್ನು ತಲೆ ಮೇಲೆ ಕೂರಿಸಿ ಫೋಟೊಗೆ ಪೋಸ್ ಕೂಡ ಕೊಟ್ಟಿದ್ದಾರೆ. ದುಬೈನ ಸುಂದರವಾದ ಫ್ಲವರ್ ಗಾರ್ಡನ್ ಗೂ ಭೇಟಿ ಕೊಟ್ಟಿದ್ದು, ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ.

Source link
ಮೈ ಚಳಿ ಬಿಟ್ಟು ದುಬೈ ಬೀಚಿಗಿಳಿದ ‘Shravani Subramanya’ ನಟಿ ಶ್ರೀವಲ್ಲಿ