ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜನವರಿ 08) ಬಿಡುಗಡೆಯಾಗಿದೆ. ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ಟಾಕ್ಸಿಕ್’ ಆ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ಮೇಕಿಂಗ್ ಉಳ್ಳ ಟೀಸರ್ ಬಿಡುಗಡೆಯಾಗಿದೆ. ಯಶ್, ‘ಕೆಜಿಎಫ್’ ಸಿನಿಮಾ ಹೆಚ್ಚು ರಗಡ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಟೀಸರ್ ನಿಂದಲೇ ತಿಳಿಯುತ್ತಿದೆ. ಸಿನಿಮಾವನ್ನು ಪಕ್ಕಾ ಹಾಲಿವುಡ್ ‘ಮಾನದಂಡ’ಗಳಿಗೆ ಅನುಗುಣವಾಗಿ ನಿರ್ಮಿಸಿರುವುದು ಟೀಸರ್ ನಿಂದಲೇ ತಿಳಿಯುತ್ತಿದೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾ ಪಕ್ಕಾ ‘ದೊಡ್ಡವರ’ ಸಿನಿಮಾ, ಈ ಸಿನಿಮಾ ಕಿರಿಯರಿಗಲ್ಲ ಎಂದು ಟೀಸರ್ ಸಾರಿ ಹೇಳುತ್ತಿದೆ.
ಈಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಲ್ಲಿಯೇ ಹಸಿ ಬಿಸಿ ದೃಶ್ಯವಿದೆ. ಯಶ್, ಸ್ಮಶಾನದ ಮುಂದೆ ಕಾರಿನಲ್ಲಿ ಯುವತಿಯೊಟ್ಟಿಗೆ ಕಾಣಿಸಿಕೊಂಡಿರುವ ದೃಶ್ಯವಿದೆ. ಅದನ್ನು ಯಶ್ ಅವರ ರಾಯ ಪಾತ್ರದ ‘ಶಕ್ತಿ’ಯನ್ನು ತೋರ್ಪಡಿಸಲು ನಿರ್ದೇಶಕರು ಬಳಸಿದ್ದಾರೆ. ಟೀಸರ್ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುವುದು ಪಕ್ಕಾ ಎನಿಸುತ್ತಿದೆ. ಈ ದೃಶ್ಯವೊಂದೇ ಜೊತೆಗೆ ಬಿಡುಗಡೆಯಾದ ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಆಗಿದ್ದ ಟೀಸರ್ ನಲ್ಲಿಯೂ ಸಹ ಸಾಕಷ್ಟು ಹಸಿ-ಬಿಸಿ ದೃಶ್ಯಗಳು ಕಂಡುಬಂದವು.
ಕಳೆದ ವರ್ಷ ಬಿಡುಗಡೆ ಆಗಿದ್ದ ಟೀಸರ್ ನಲ್ಲಿ ಸಾಕಷ್ಟು ವಿದೇಶಿ ಯುವತಿಯರು ಅರೆನಗ್ನರಾಗಿ, ಮಾದಕ ವ್ಯಸನ ಮಾಡುತ್ತಿರುವ ದೃಶ್ಯಗಳು, ಮಾದಕ ವಸ್ತುವನ್ನು ಬಳಸುತ್ತಿರುವ ದೃಶ್ಯಗಳು, ಅಶ್ಲೀಲ ಸಜ್ಜೆಗಳನ್ನು ಹೊಂದಿರುವ ದೃಶ್ಯಗಳನ್ನು ಒಳಗೊಂಡಿತ್ತು. ಇದನ್ನೆಲ್ಲ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಿಬಿಎಫ್ ಸಿ ‘ಎ’ ಪ್ರಮಾಣ ಪತ್ರ ನೀಡುವುದು ಖಾತ್ರಿ ಎನ್ನಬಹುದು.
ಇದನ್ನೂ ಓದಿ:ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ
ಅಸಲಿಗೆ ಇದನ್ನು ಮೊದಲೇ ನೋಡಿಯೇ ಚಿತ್ರತಂಡ ಹೆಜ್ಜೆ ಇಟ್ಟಿದೆ ಅನಿಸುತ್ತದೆ. ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾದ ಅಡಿಬರಹದಲ್ಲೇ ಇದು ಮಕ್ಕಳಿಗೆ ಅಥವಾ ಅಪ್ತಾಪ್ತರಿಗಲ್ಲ ಸುಳಿವನ್ನು ಚಿತ್ರತಂಡ ನೀಡಿದೆ. ‘ಟಾಕ್ಸಿಕ್’ ಸಿನಿಮಾದ ಅಡಿಬರಹ ಅಥವಾ ಟ್ಯಾಗ್ಲೈನ್ ‘ಎ ಫೇರಿ ಟೇಲ್ ಆಫ್ ಗ್ರೋನ್ ಅಪ್ಸ್’ (ಒಂದು ದೊಡ್ಡವರ ಕತೆ) ಎಂದಿದೆ. ಆದ್ದರಿಂದ ಹೆಚ್ಚು ಹಸಿ-ಬಿಸಿ ದೃಶ್ಯಗಳನ್ನು ಚಿತ್ರೀಕರಿಸಿರುವುದು ಯೋಜಿತ ನಿರ್ಣಯವೇ ಆಗಿದೆ.
ಯಶ್ ತಮ್ಮ ಈ ವೃತ್ತಿ ಜೀವನದಲ್ಲಿ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದಿಲ್ಲ. ಆದರೆ ‘ಟಾಕ್ಸಿಕ್’ನಲ್ಲಿ ಮೊದಲ ಬಾರಿಗೆ ಇಂಥಹ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಯಶ್ ಅಭಿಮಾನಿಗಳು, ವಿಶೇಷವಾಗಿ ಅವರ ಮಹಿಳಾ ಅಭಿಮಾನಿಗಳು ಸ್ವೀಕರಿಸುತ್ತಾರೆ ಕಾದು ನೋಡಬೇಕಾಗಿದೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್ ದಾಸ್, ಬಂಡವಾಳ ಹೂಡಿರುವುದು ಕೆವಿಎನ್ ಮತ್ತು ಯಶ್ ಅವರ ಮಾನ್ ಸ್ಟರ್ ಮೈಂಡ್ಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:19 am, ಗುರುವಾರ, 8 ಜನವರಿ 26