ತುಮಕೂರು, ಜನವರಿ 08: ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗೋದು, ಗಂಡನಿಂದಲೇ ದೂರವಾಗೋ ಘಟನೆಗಳು ಮಾಮೂಲಾಗಿ ನಡೆಯುತ್ತಲೇ ಇರುತ್ತವೆ. ಆದರೆ ಕಲ್ಪತರು ನಾಡು ತುಮಕೂರಲ್ಲಿ ಈ ಕೇಸ್ ಉಲ್ಟಾ ಆಗಿದೆ. ಸೊಸೆ ಕಾಟಕ್ಕೆ ಬೇಸತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60) ಶವ ಇದೆ.
ಘಟನೆ ಏನು?
ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಳು. ಇದೇ ಕಾರಣಕ್ಕೆ ಅಡುಗೆ ಸೇರಿ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಜೊತೆಗೆ ಈ ನಡುವೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ಬಗ್ಗೆಯೂ ಮಾತನಾಡುತ್ತಿದ್ದಳು. ಹೀಗಾಗಿ ಎಲ್ಲಿ ಮಗನ ಸೊಸೆ ತನ್ನಿಂದ ದೂರ ಮಾಡ್ತಾಳೋ ಎಂಬ ಭಯಕ್ಕೆ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಿನ್ನೆ ಬೆಳಗ್ಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಭ್ರಮರಾಂಬಿಕೆ ಶವ ಫಾರ್ಮ್ ಹೌಸ್ನಿಂದ 200 ಮೀಟರ್ ದೂರವಿರುವ ಪಂಪ್ಹೌಸ್ನಲ್ಲಿದೆ. ತಾಯಿ ನೇಣುಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡ ಮಗ ಮನುಕುಮಾರ್ ಶವ ಕೆಳಗಿಳಿಸಿದ್ದ. ಬಳಿಕ ಚೇಳೂರು ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ: ಪತ್ನಿ ಮಗ ಇದ್ರೂ ತಂಗಿ ಜತೆ ಅಣ್ಣ ಸಂಸಾರ; ಅಣ್ಣ-ತಂಗಿ ಲವ್ವಿಡವ್ವಿ ಸಾವಿನಲ್ಲಿ ಅಂತ್ಯ!
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಕರಣದ ಬಗ್ಗೆ ಅನುಮಾನ ಪಟ್ಟಿದ್ದರು. ಮೃತ ಮಹಿಳೆಯ ಕಣ್ಣಿನ ಗುಡ್ಡೆ ನಾಪತ್ತೆಯಾಗಿದ್ದು, ಇದು ಕೊಲೆಯಾಗಬಹುದೆಂಬ ಲೆಕ್ಕಾಚಾರ ಹಾಕಿದ್ದರು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಧ್ಯರಾತ್ರಿ 1.45ರ ಸುಮಾರಿಗೆ ಫಾರ್ಮ್ ಹೌಸ್ ನಿಂದ 200 ಮೀಟರ್ ದೂರದ ಪಂಪ್ ಹೌಸ್ ಭ್ರಮರಾಂಬಿಕೆ ತಾವೇ ನಡೆದುಕೊಂಡು ಬಂದು ಆತ್ಮಹತ್ಯೆಗೆ ಶರಣಾಗಿರೋದು ದೃಢಪಟ್ಟಿದೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವ ಕೆಳಗಿಳಿಸುವಾಗ ಕಣ್ಣಿಗೆ ಗಾಯವಾದ ಸಂಗತಿ ಗೊತ್ತಾಗಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಸೊಸೆ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.