ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?


ಜನವರಿ 8: ಈ ಬಾರಿ ಐಟಿ ರಿಟರ್ನ್ಸ್ (ಆದಾಯ ತೆರಿಗೆ) ಸಲ್ಲಿಸಿರುವ ಬಹಳ ತೆರಿಗೆ ಪಾವತಿದಾರರಿಗೆ ರೀಫಂಡ್‌ಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ರೀಫಂಡ್ ಆಗದೇ ಇರುವ ಪ್ರಕರಣಗಳು ಕಡಿಮೆ ಇದ್ದವು. ಈ ವರ್ಷ ಇದಾಗಿದೆ. ರೀಫಂಡ್‌ಗಳು ಬರುವುದಕ್ಕೆ ಇನ್ನೂ ಸಮಯಾವಕಾಶವಿದೆಯಾದರೂ ಬಹಳ ಜನರು ತಮಗೆ ರೀಫಂಡ್ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

ಆದಾಯ ತೆರಿಗೆ ಇಲಾಖೆ ಈ ಬಾರಿ ಹಲವು ಐಟಿಆರ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಕಾನೂನು ಪ್ರಕಾರ ಡಿಸೆಂಬರ್ 31 ರವರೆಗೂ ಇಲಾಖೆಗೆ ಐಟಿಆರ್‌ಗಳ ಪ್ರೋಸಸ್ ಮಾಡಲು ಕಾಲಾವಕಾಶವಿದೆ. ಹೀಗಾಗಿ, ರೀಫಂಡ್‌ಗಳು ವಿಳಂಬವಾಗುವುದು ಸಹಜ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್‌ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಹೆಚ್ಚಿನ ಮೌಲ್ಯದ ರೀಫಂಡ್‌ಗಳನ್ನು ಕ್ಲೀಮ್ ಮಾಡಿದ್ದರೆ ವಿಳಂಬ

ತೆರಿಗೆ ಪಾವತಿದಾರರು ತಮ್ಮ ಐಟಿಆರ್‌ನಲ್ಲಿ ಹೆಚ್ಚಿನ ಮೌಲ್ಯದ ರೀಫಂಡ್‌ಗಳಿಗೆ ಕ್ಲೀಮ್ ಮಾಡಿದ್ದರೆ, ಅಂತಹ ಪ್ರಕರಣಗಳನ್ನು ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತದೆ. ರೀಫಂಡ್ ವಿಳಂಬವಾಗಲು ಇದೂ ಒಂದು ಪ್ರಮುಖ ಕಾರಣ.

ಹೇಗಾದರೂ, ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸುವಾಗ ಏನಾದರೂ ತಪ್ಪು ಮಾಡಿದರೆ ಆಗಲೂ ಕೂಡ ರೀಫಂಡ್ ವಿಳಂಬವಾಗುತ್ತದೆ. ಈ ವರ್ಷ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಐಟಿಆರ್‌ನಲ್ಲಿ ದೋಷ ಇಲಾಖೆಯು ತೆರಿಗೆಪಾವತಿದಾರರಿಗೆ ನೋಟೀಸ್ ಕೊಟ್ಟು, ಆ ದೋಷವನ್ನು ಸರಿಪಡಿಸಲು ತಿಳಿಸುತ್ತದೆ. ಹೀಗಾಗಿ, ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿ ಶುರು ಮಾಡಿ ಕೆಲಸಗಾರರ ಆಟಕ್ಕೆ ಬೇಸ್ತು ಬಿದ್ದ ಆಸ್ಟ್ರೇಲಿಯನ್ ಉದ್ಯಮಿ

ಕೆಲ ಉದ್ಯೋಗಸ್ಥ ವ್ಯಕ್ತಿಗಳು ತಮ್ಮ ಐಟಿಆರ್‌ನಲ್ಲಿ ಸೆಕ್ಷನ್ 80ಸಿ, 80ಡಿ ಇತ್ಯಾದಿ ಅಡಿ ಡಿಡಕ್ಷನ್ ಕ್ಲೀಮ್ ಮಾಡಿರುವುದು. ಆದರೆ, ತಾವು ಕೆಲಸ ಮಾಡುವ ಕಂಪನಿಯ ಬಳಿ ಡಿಕ್ಲೇರ್ ಮಾಡದೇ ಇದ್ದಿರಬಹುದು. ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಪರಿಶೀಲನೆ ನಡೆಸುತ್ತಿದೆ. ಇದೂ ಸೇರಿದಂತೆ ಬೇರೆ ಯಾವುದಾದರೂ ವ್ಯತ್ಯಾಸಗಳು ಐಟಿಆರ್‌ನಲ್ಲಿ ಕಂಡು ಬಂದಲ್ಲಿ ಇಲಾಖೆ ತೆರಿಗೆ ಪಾವತಿದಾರರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ನೋಟೀಸ್ ನೀಡಿ, ಸರಿಪಡಿಸಲು ತಿಳಿಸುತ್ತದೆ. ಎಲ್ಲಾ ಪ್ರಕ್ರಿಯೆಗಳಿಗೆ ಸಮಯ ಹಿಡಿಯುವುದರಿಂದ ಹಲವರಿಗೆ ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *