ಬೆಳಗಾವಿ, ಜನವರಿ 08: ಕುಡಿದು ಬಂದು ಕಿರಿ ಕಿರಿ ಮಾಡುತ್ತಾನೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ಚಟ್ಟ ಕಟ್ಟಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಿರಣ್ ಆಲೂರೆ (31) ಮೃತ ಯುವಕನಾಗಿದ್ದು, ಆರೋಪಿ ನಿಜಗುಣಿ ಮತ್ತು ಉಸ್ಮಾನ್ ಮುಲ್ಲಾ ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ವಿಶೇಷ ಅಂದ್ರೆ ಕಿರಣ್ ಕೊಲೆ ರಹಸ್ಯವನ್ನು ಇಲ್ಲಿ ಭೇದಿಸಿರೋದು ಆತನ ಸ್ನೇಹಿತರು ಅನ್ನೋದು ಗಮನಾರ್ಹ.
ಮದ್ಯದ ದಾಸನಾಗಿದ್ದ ಮಗ ಕಿರಣ್ ನ ಕಾಟ ತಾಳಲಾರದೆ ತಂದೆ ನಿಜಗುಣಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ತಾನು ಕೆಲಸ ಮಾಡುತ್ತಿರುವ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾ ಜೊತೆ ಸೇರಿಕೊಂಡು ಮಗನನ್ನು ಮುಗಿಸಿದ್ದ. ಕುತ್ತಿಗೆಗೆ ವೈರ್ನಿಂದ ಬಿಗಿದು ಕಿರಣ ಹತ್ಯೆಮಾಡಿದ್ದ ಆರೋಪಿಗಳು, ಕಾರಿನಲ್ಲಿ ಶವ ಹಿಡಿದಿದ್ದರು. ಬಳಿಕ ಕಿರಣ್ ಸಂಗೀತ ಕರೆಮಾಡಿದ್ದ ನಿಜಗುಣಿ, ಹೃದಯಾಘಾತದಿಂದ ನಿಮ್ಮ ಸ್ನೇಹಿತ ಆಫೀಸಿದ್ದಾನೆ ಎಂದು ತಿಳಿಸಿದ್ದ. ಜೊತೆಗೆ ತರಾತುರಿಯಲ್ಲಿ ಮೃತದೇಹವನ್ನು ಸುಡಲು ಮುಂದಾಗಿದ್ದ. ಆದರೆ ಅವರ ಸಂಪ್ರದಾಯದಂತೆ ಶವ ಹೂಳಬೇಕಿರುವ ಕಾರಣ ನಿಜಗುಣಿ ನಡೆ ಕಿರಣ್ ಸ್ನೇಹಿತರಲ್ಲಿ ಅನುಮಾನ ಮೂಡಿಸಿದೆ.
ಇದನ್ನೂ ಓದಿ: ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಕಿರಣ್ ತಂದೆ ನಿಜಗುಣಿ ವರ್ತನೆಯ ಬಗ್ಗೆ ಸಂಶಯಗೊಂಡು ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಬಳಿ ಗಾಯ ಮತ್ತು ಕಿವಿಯಲ್ಲಿ ರಕ್ತಸ್ರಾವ ಆಗಿರೋದು ಕಂಡುಬಂದಿದೆ. ತಮ್ಮ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕ ಹಿನ್ನೆಲೆ ನಿಜಗುಣಿ ಕೆಲಸ ಮಾಡುವ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾನನ್ನು ಕಿರಣ್ ಅವರು ಸ್ನೇಹಿತರ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಕೂಡಲೇ ನಿಜಗುಣಿಯನ್ನ ಸ್ಮಶಾನಕ್ಕೆ ಕರೆಸಿ ಆತನನ್ನೂ ಘಟನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಮಗನನ್ನು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಆರೋಪಿಗಳ ವಿರುದ್ಧ ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.