‘ಟಾಕ್ಸಿಕ್’ ಟೀಸರ್​ನ ಆ​ ಡೈಲಾಗ್​​ನಲ್ಲೇ ಅಡಗಿದೆ ಚಿತ್ರದ ಕಥೆ

‘ಟಾಕ್ಸಿಕ್’ ಟೀಸರ್​ನ ಆ​ ಡೈಲಾಗ್​​ನಲ್ಲೇ ಅಡಗಿದೆ ಚಿತ್ರದ ಕಥೆ


‘ಟಾಕ್ಸಿಕ್’ ಚಿತ್ರದ ಟೀಸರ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಮೇಕಿಂಗ್ ಹೇಗಿರಲಿದೆ ಎಂಬ ಸಣ್ಣ ಝಲಕ್ ಟೀಸರ್ ಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಬರೋ ಬೋಲ್ಡ್ ದೃಶ್ಯಗಳು ನೋಡಿದರೆ ಇದೊಂದು ‘ಎ’ ಸರ್ಟಿಫಿಕೇಟ್ ಪಡೆದಿರುವ ಚಿತ್ರ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಹೀಗಿರುವಾಗಲೇ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಲ್ಲಿ ಬರೋ ಕೊನೆಯ ಡೈಲಾಗ್ ಗಮನ ಸೆಳೆಯುವ ರೀತಿಯಲ್ಲಿದೆ. ಇಡೀ ಚಿತ್ರ ಕಥೆಯಲ್ಲೇ ಅಡಿಗೆ ಅಗತ್ಯ.

‘ಟಾಕ್ಸಿಕ್’ ಚಿತ್ರದ ಓಪನಿಂಗ್ ದೃಶ್ಯ ಆರಂಭ ಆಗೋದು ಸ್ಮಶಾನದ ಮೂಲಕ. ಹೆಣ ಹೂಳುವ ಕೆಲಸ ಆಗುತ್ತಾ ಇರುತ್ತದೆ. ಅಲ್ಲಿಗೆ ಬರೋ ಗ್ಯಾಂಗ್ ಇವರ ಮೇಲೆ ಹಲ್ಲೆ ಮಾಡುತ್ತಾರೆ. ಅವರನ್ನು ಸ್ಮಶಾನದಿಂದ ಹೊರ ಹಾಕುತ್ತಾರೆ. ಆಗ ಎಂಟ್ರಿ ಆಗುತ್ತಾನೆ ರಾಯ (ಯಶ್). ಬೋಲ್ಡ್ ದೃಶ್ಯವನ್ನು ತೋರಿಸೋ ನಿರ್ದೇಶಕಿ ಗೀತು ಮೋಹನ್ ದಾಸ್, ನಂತರ ಮಾಸ್ ಅಂಶ ತೋರಿಸುತ್ತಾರೆ.

ಯಶ್ ಅವರಿಗೆ ಇಡೀ ಸಿನಿಮಾದಲ್ಲಿ ಇರೋದು ಒಂದೇ ಡೈಲಾಗ್, ಅದುವೇ ‘ಅಪ್ಪನ ಮನೆ’ ಎಂದ. ಈ ಪದದ ಅರ್ಥ ‘ಲೀಡರ್ ಬಂದಾಯ್ತು’ ಎಂದು. ಅಥವಾ ರಕ್ಷಕ ಬಂದ ಎಂಬರ್ಥವೂ ಬರುತ್ತದೆ. ಅಂದರೆ, ಕೆಟ್ಟವರಿಗೆ ರಾಯ ದುಸ್ವಪ್ನನಾಗುತ್ತಾನೆ ಎಂಬರ್ಥವನ್ನೂ ಕಲ್ಪಿಸಬಹುದು. ಈ ಚಿತ್ರದಲ್ಲಿ ಯಶ್ ಅವರೇ ಗ್ಯಾಂಗ್ ಸ್ಟಾರಾ ಎಂಬ ಪ್ರಶ್ನೆ ಮೂಡುತ್ತದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್

‘ಟಾಕ್ಸಿಕ್’ ಸಿನಿಮಾ ಕೇವಲ ವಯಸ್ಕರಿಗೆ ಮಾತ್ರ. ಮೇಕಿಂಗ್ ಹಾಲಿವುಡ್ ಸ್ಟೈಲ್ ನಲ್ಲಿದೆ. ಈ ಟೀಸರ್ ಮೂರು ಗಂಟೆಗೆ ಬರೋಬ್ಬರಿ 3 ಲಕ್ಷದಷ್ಟು ವೀಕ್ಷಣೆ ಕಂಡಿದೆ ಎಂಬುದು ವಿಶೇಷ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19 ರಂದು ಸಿನಿಮಾ ರಿಲೀಸ್ ಆಗಲಿದೆ. ಟ್ರೇಲರ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *