ಬೆಂಗಳೂರು, ಜ.8: ವೈಟ್ ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು (ಬೆಂಗಳೂರು ಮಕ್ಕಳ ಅಪಹರಣ) ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಮೋರಿಗೆ ಎಸೆದ ಪ್ರಕರಣದಲ್ಲಿ ಸ್ಫೋಟಕ ಸತ್ಯ ಹೊರಬಿದ್ದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್ ಶೇಕ್ ಎಂಬುವವರ ಪುತ್ರಿ ಶಹಜಾನ್ ಕತೂನ್ (6) ಕೊಲೆಯಾದ ಬಾಲಕಿ. ಇದೀಗ ಈ ಬಾಲಕಿಯ ಕೊಲೆಯ ಸುತ್ತ, ಹಲವು ಅನುಮಾನಗಳು ಮೂಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ.ಈ ಬಾಲಕಿಯ ಕೊಲೆಗೆ ಆಕೆಯ ತಾಯಿಯೇ ನೇರ ಕಾರಣ ಎಂದು ಹೇಳಿದ್ದಾರೆ. ಬಾಲಕಿ ತಾಯಿ ಜೊತೆ ಜಗಳಕ್ಕೆ ಕೊಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಮತ್ತೊಂದು ಕಡೆ ಬಾಲಕಿ ತಾಯಿ ಜಗಳ ಮಾಡಿಲ್ಲ ಎಂದು ಬಾಲಕಿಯ ತಂದೆ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪೊಲೀಸರು ತನಿಖೆಯಲ್ಲಿ ಈ ಕೊಲೆಯನ್ನು ಯೂಸುಫ್ ಮೀರ್ ಎಂಬ ವ್ಯಕ್ತಿ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಒಂದು ಸಿಸಿಟಿವಿ ದೃಶ್ಯವಿದೆ. ಆರೋಪಿ ಯೂಸುಫ್ ಮೀರ್ ಲೇಬರ್ ಶೆಡ್‌ಗಳಲ್ಲಿ ಎಲ್ಲ ಮಕ್ಕಳ ಜೊತೆ ಚೆನ್ನಾಗಿ ಸಲುಗೆಯಿಂದ ಇದ್ದ. ಪ್ರತಿ ದಿನ ಮಕ್ಕಳಿಗೆ ತಿಂಡಿ ಬಿಸ್ಕೆಟ್ ನೀಡಿ, ಪ್ರೀತಿಯಿಂದ ಕಾಣುತ್ತಿದ್ದ ಎಂದು ಹೇಳಲಾಗಿದೆ. ಅದರೂ ಆತ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಯೂಸುಫ್ ಮೀರ್ ಅವರು ಕರೆದೊಯ್ದರು ಸಿಸಿಟಿವಿ ದೃಶ್ಯ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ಚಾಕೊಲೇಟ್ ಕೊಡಿಸೋದಾಗಿ ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಕಳೆದ ವಾರ (ಜ.5)ಈ ಘಟನೆ ನಡೆದಿದೆ. ಆರೋಪಿ ಯೂಸೂಫ್ ಒಬ್ಬ ಸೈಕೋ ಎಂಬ ಅನುಮಾನ ಶುರುವಾಗಿದೆ. ಯೂಸೂಫ್ ಮೇಲೆ ಲೇಬರ್ ಶೆಡ್ ನಿವಾಸಿಗಳು ಆತನ ಬಗ್ಗೆ ಹಲವು ಬಾರಿ ದೂರು ನೀಡಿದ್ದಾರೆ. ಹೊಸ ವರ್ಷಕ್ಕೆಂದು ಯೂಸೂಫ್‌ಗೆ ಹೋಗಿದ್ದಾನೆ. 3 ವರ್ಷಗಳಿಂದ ಈ ಲೇಬರ್ ಶೆಡ್ನಲೇ ಇದ್ದ ಎಂದು ಹೇಳಲಾಗಿದೆ. ಹೆಂಡತಿ ಮತ್ತು ಮಗುವಿನಲ್ಲಿ ಇರಬೇಕು ಎಂದು ಶ್ವಾಶತವಾಗಿ ಪ್ಲಾನ್ ಹಾಕಿಸಿಕೊಂಡಿದ್ದಾನೆ, ಆದರೆ ಕೊಲೆ ಮಾಡಿ ಬೆಂಗಳೂರಿಗೆ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಖಾಸಗಿ ಕಂಪನಿಗಳ ಅನುಕೂಲಕ್ಕಾಗಿ ಕರ್ನಾಟಕದ ಚಾಲಕರಿಗೆ ಅನ್ಯಾಯ ಮಾಡಬೇಡಿ: ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಇಲ್ಲಿದೆ ನೋಡಿ ವಿಡಿಯೋ:
ಯೂಸೂಫ್ ತನ್ನಲ್ಲೂ ಕೂಡ ಒಂದು ಕೊಲೆ ಮಾಡಿ ಬಂದಿದ್ದ ಎಂದು ಅಲ್ಲಿನ ಜನ ಹೇಳಿದ್ದಾರೆ. ಪ್ರಕರಣ ದಾಖಲಿಸಿರುವ ಪ್ರಕಾರ ಆತನಿಂದ ಬೆಂಗಳೂರಿಗೆ ಬಂದ ಐದು ದಿನದಲ್ಲೇ ಮತ್ತೊಂದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಯಾವುದೇ ಜಗಳ ಮಾಡಿಲ್ಲ, ನಾವು ಕೊಂದಿಲ್ಲ ಎಂದು ಬಾಲಕಿ ಪಾಲಕರು ಹೇಳಿದ್ದಾರೆ. ಇದೀಗ ಸಿಸಿಟಿವಿ ಆಧಾರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಮತ್ತೊಂದೆಡೆ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ