ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರ ಆಡಿದ್ದ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್, ಬಾರ್‌ನಲ್ಲಿ ಬೌನ್ಸರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿದ್ದರೆ, ಅವರಿಗೆ ಬರೋಬ್ಬರಿ 36 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಲಾಗಿದೆ. ವಾಸ್ತವವಾಗಿ ಆಶಸ್‌ಗೂ ಮೊದಲು ನಡೆದಿದ್ದ ನ್ಯೂಜಿಲೆಂಡ್ ಪ್ರವಾಸದಲ್ಲಿ ಬ್ರೂಕ್, ಬಾರ್ ಬೌನ್ಸರ್ ಜೊತೆ ಜಗಳವಾಡಿದ್ದರು.