How to Clean Leafy Vegetables: ಪಾಲಕ್ , ಎಲೆಕೋಸು ಮುಂತಾದ ಎಲೆ ತರಕಾರಿಗಳಲ್ಲಿ ಹೆಚ್ಚಾಗಿ ಸಣ್ಣ ಹಸಿರು ಕೀಟಗಳಿರುತ್ತವೆ. ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಪ್ಲೇನ್ ನೀರು ಸಾಕಾಗುವುದಿಲ್ಲ. ಆದ್ದರಿಂದ ಪಾಲಕ್ ಮತ್ತು ಎಲೆಕೋಸು ಕ್ಲೀನ್ ಮಾಡಲು ಸಹಾಯ ಮಾಡುವ ಕೆಲವು ಸುಲಭ ಟಿಪ್ಸ್ ಇಲ್ಲಿವೆ.

ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಹಸಿರು ಎಲೆಗಳ ತರಕಾರಿಗಳು ಹೇರಳವಾಗಿ ಮಾರಾಟವಾಗುತ್ತವೆ. ಇವುಗಳ ಸೇವನೆಯೂ ಆರೋಗ್ಯಕ್ಕೂ ಪ್ರಯೋಜನಕಾರಿ. ಹಸಿರು ಎಲೆಗಳ ತರಕಾರಿಗಳ ಪೈಕಿ ಪಾಲಕ್ ಮತ್ತು ಎಲೆಕೋಸನ್ನು ಹೆಚ್ಚು ಸೇವಿಸಲಾಗುತ್ತದೆ. ಈ ಎರಡು ತರಕಾರಿಗಳಿಂದ ಅನೇಕ ರೀತಿಯ ಭಕ್ಷ್ಯಗಳನ್ನೂ ತಯಾರಿಸಲಾಗುತ್ತದೆ. ಆದರೆ ಈ ಎಲೆಗಳ ತರಕಾರಿಗಳಲ್ಲಿ ಕೆಲವೊಮ್ಮೆ ಕಣ್ಣಿಗೆ ಕಾಣದಂತಹ ಕೀಟಗಳಿದ್ದು, ಇವು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ.

ಆದರೆ ಅಡುಗೆ ಮಾಡುವ ಮೊದಲು ಹಸಿರು ಎಲೆಗಳ ತರಕಾರಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕೆಲವೊಮ್ಮೆ ನೀರಿನಿಂದ ಸ್ವಚ್ಛಗೊಳಿಸುವುದು ಸಹ ಸಾಕಾಗುವುದಿಲ್ಲ. ಆಗ ಪಾಲಕ್ ಮತ್ತು ಎಲೆಕೋಸಿನಲ್ಲಿ ತೆವಳುವ ಕೀಟಗಳನ್ನು ಸ್ವಚ್ಛಗೊಳಿಸಲು ಕೆಲವು ಸುಲಭ ಟಿಪ್ಸ್ ಫಾಲೋ ಮಾಡಬಹುದು.

ಕೀಟಗಳ ಜೊತೆಗೆ ಕೀಟನಾಶಕಗಳ ಬಗ್ಗೆಯೂ ನಿಮಗೆ ಚಿಂತೆಯಿದ್ದರೆ ವಿನೆಗರ್ ಉತ್ತಮ. 3 ಭಾಗ ನೀರನ್ನು 1 ಭಾಗ ಬಿಳಿ ವಿನೆಗರ್ ಅಥವಾ 2 ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ. ಈಗ ಎಲೆಕೋಸಿನ ಮೇಲಿನ ಎಲೆಗಳನ್ನು ತೆಗೆದುಹಾಕಿ. ಏಕೆಂದರೆ ಎಲೆಗಳಲ್ಲಿ ಹೆಚ್ಚಿನ ಕೊಳೆ ಸಂಗ್ರಹವಾಗಿರುತ್ತದೆ. ನಂತರ ಇದನ್ನು ಕಟ್ ಮಾಡಿ 10 ನಿಮಿಷಗಳ ಕಾಲ ವಿನೆಗರ್ ಅಥವಾ ನಿಂಬೆ ರಸ ದ್ರಾವಣದಲ್ಲಿ ನೆನೆಸಿಡಿ. ಆ ನಂತರ ಪುನಃ ತಾಜಾ ನೀರಿನಿಂದ ಚೆನ್ನಾಗಿ ತೊಳೆದು ಅಡುಗೆ ಮಾಡಲು ಬಳಸಿ. ಒಂದು ವೇಳೆ ಸಂಗ್ರಹಿಸುವುದಾದರೆ ಒಣಗಿಸಿ ತೆಗೆದಿಡಿ.

ವಿಶೇಷವಾಗಿ ಉಪ್ಪು ಕೀಟಗಳನ್ನು ಮೇಲ್ಮೈಯಿಂದ ಹೊರಹೋಗುವಂತೆ ಮಾಡುತ್ತದೆ ಮತ್ತು ಅರಿಶಿನವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಒಂದು ದೊಡ್ಡ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. 2 ಚಮಚ ಉಪ್ಪು ಮತ್ತು 1 ಚಮಚ ಅರಿಶಿನ ಸೇರಿಸಿ. ಪಾಲಕ್ ಅಥವಾ ಎಲೆಕೋಸನ್ನು ಇದರಲ್ಲಿ 10-15 ನಿಮಿಷಗಳ ಕಾಲ ನೆನೆಸಿಡಿ. ಕೀಟಗಳು ಸಾಯುತ್ತವೆ ಮತ್ತು ಕೆಳಭಾಗದಲ್ಲಿ ನೆಲೆಗೊಳ್ಳುತ್ತವೆ ಅಥವಾ ಮೇಲಕ್ಕೆ ತೇಲುತ್ತವೆ. ಇದಾದ ನಂತರ ಇವುಗಳನ್ನು ಎರಡು ಬಾರಿ ಶುದ್ಧ ನೀರಿನಿಂದ ತೊಳೆಯಿರಿ. ಆ ನಂತರ ಬೇಯಿಸಿ.

ಪಾಲಕ್ ಕತ್ತರಿಸುವ ಮೊದಲು ತೊಳೆಯಿರಿ. ಹರಿಯುವ ನೀರಿನ ಅಡಿಯಲ್ಲಿ ಎಲೆಯನ್ನು ಸ್ವಚ್ಛಗೊಳಿಸುವುದು ಉತ್ತಮ. ಅಲ್ಲದೆ ತುಂಬಾ ಬಿಸಿನೀರನ್ನು ಬಳಸುವುದನ್ನು ತಪ್ಪಿಸಿ. ಏಕೆಂದರೆ ಇದರಿಂದ ಎಲೆಗಳು ಒಣಗಲು ಆರಂಭಿಸುತ್ತದೆ. ಉಗುರು ಬೆಚ್ಚಗಿನ ನೀರಿನಿಂದ ಮಾತ್ರ ತೊಳೆಯಿರಿ.

ಎಲೆಕೋಸನ್ನು ಎಂದಿಗೂ ಪೂರ್ತಿಯಾಗಿ ತೊಳೆಯಬೇಡಿ. ಅದನ್ನು ಅರ್ಧದಷ್ಟು ಕತ್ತರಿಸಿ ಅಥವಾ ಎಲೆಗಳನ್ನು ಬೇರ್ಪಡಿಸಿ ತೊಳೆಯಿರಿ. ಏಕೆಂದರೆ ಕೀಟಗಳು ಒಳ ಪದರಗಳಲ್ಲಿ ಅಡಗಿಕೊಂಡಿರುತ್ತವೆ.

Source link
ಕೇವಲ ನೀರಿನಿಂದ ಕ್ಲೀನ್ ಆಗಲ್ಲ.. ಪಾಲಕ್, ಎಲೆಕೋಸು ಸ್ವಚ್ಛವಾಗಲು ಇದನ್ನೂ ಬೆರೆಸಿ