Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!

Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!

Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!

ಬಿಗ್‌ಬಾಸ್‌ನಿಂದ ಹೊರಬಂದ ನಂತರ ಜಾಹ್ನವಿ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿಗೆ ಕಾಟ ಕೊಟ್ಟಿದ್ದರಿಂದ ಇಲ್ಲಿನ ಜನ ತನಗೆ ತೊಂದರೆ ಕೊಡಬಹುದೆಂಬ ಭಯದಲ್ಲಿದ್ದೆ ಎಂದು ಅವರು ಬಹಿರಂಗಪಡಿಸಿದರು.

ಬಿಗ್‌ಬಾಸ್‌ (Bigg Boss) ನಿಂದ ಹೊರಕ್ಕೆ ಬಂದ ಮೇಲೆ ಜಾಹ್ನವಿ ಅವರಿ ಭರ್ಜರಿ ಡಿಮಾಂಡ್‌ ಉಂಟಾಗಿದ್ದು, ಹಲವಾರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಯುತ್ತಿದ್ದಾರೆ.

ಇದೀಗ, ಅವರಿಗೆ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಕರೆಯಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಾಹ್ನವಿ ಅವರು ತುಳುನಾಡ ಆಚರಣೆಗಳ ಬಗ್ಗೆ ಸೊಗಸಾಗಿ ಮಾತನಾಡಿದರು.

ಆದರೆ, ಇದೇ ವೇಳೆ ಕುತೂಹಲದ ವಿಷಯವೊಂದನ್ನು ಅವರು ಶೇರ್‍ ಮಾಡಿಕೊಂಡರು. ಅದೇನೆಂದರೆ, ನನಗೆ ಇಲ್ಲಿಗೆ ಬರಲು ತುಂಬಾ ಭಯ ಉಂಟಾಯ್ತು. ಯಾರು ನನಗೆ ಏನು ಮಾಡಿ ಬಿಡ್ತಾರೋ ಎನ್ನುವ ಭಯವಾಗಿತ್ತು. ಅದಕ್ಕೆ ಕಾರಣ ರಕ್ಷಿತಾ ಶೆಟ್ಟಿ (Bigg Biss Rakshita Shetty) ಅಂದಿದ್ದಾರೆ.

ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ಜಾಹ್ನವಿ ಸಾಕಷ್ಟು ಕಾಟ ಕೊಟ್ಟಿದ್ದರು. ಅದನ್ನೇ ಇಲ್ಲಿಯ ವೀಕ್ಷಕರು ಮನಸ್ಸಿನಲ್ಲಿ ಇಟ್ಟುಕೊಂಡು ಏನಾದರೂ ತೊಂದರೆ ಮಾಡಿಬಿಟ್ಟರೆ ಎನ್ನುವ ಭಯ ಇತ್ತಂತೆ ಜಾಹ್ನವಿಗೆ.

ಆದರೆ, ಇಲ್ಲಿಯ ಜನ ತುಂಬಾ ಒಳ್ಳೆಯವರು. ಬಿಗ್‌ಬಾಸ್‌ ಅನ್ನು ಕೇವಲ ಆಟವಾಗಿ ನೋಡಿದ್ದಾರೆ. ಅಲ್ಲಿ ಎಲ್ಲವೂ ನಡೆಯುತ್ತದೆ ಎನ್ನುವುದು ಅವರಿಗೆ ಗೊತ್ತು. ಆದ್ದರಿಂದ ನನಗೆ ಏನೂ ಸಮಸ್ಯೆ ಮಾಡಲಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಅಷ್ಟಕ್ಕೂ ಈ ಹಿಂದೆ ಜಾಹ್ನವಿ, ರಕ್ಷಿತಾ ಶೆಟ್ಟಿ ಕಂಡರೆ ನನಗೆ ಹೊಟ್ಟೆ ಉರಿಯಾಗುತ್ತದೆ. ಮಂಗಳೂರಿನಲ್ಲಿ ಆಕೆ ಹುಟ್ಟಿದ್ದರಿಂದ ಅಲ್ಲಿಯ ಜನ ಪ್ರೀತಿ ಕೊಡುವುದನ್ನು ನೋಡಿ ನಾನೂ ಅಲ್ಲಿಯೇ ಹುಟ್ಟಬಾರದಿತ್ತಾ ಎಂದು ಎನ್ನಿಸುವುದು ಇದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.

Source link

Leave a Reply

Your email address will not be published. Required fields are marked *