‘ರಾಧೆ ಶ್ಯಾಮ್’ ಸಿನಿಮಾ ಹೆಸರು ಹೇಳಿದಾಗೆಲ್ಲ, ಅದು ಕಂಡ ದುರಂತ ಅಂತ್ಯ ನೆನಪಾಗುತ್ತದೆ. ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿತ್ತು. ಈಗ ‘ರಾಧೆ ಶ್ಯಾಮ್’ ಸಿನಿಮಾ ಬಳಿಕ ‘ರಾಜಾ ಸಾಬ್’ ಕೂಡ ಇದೆ ಹಾದಿಯಲ್ಲಿ ಸಾಗುವ ಸೂಚನೆ ಸಿಕ್ಕಿದೆ. ಈ ಸಿನಿಮಾನೋಡಿದ ಅನೇಕರು ನೆಗೆಟಿವ್ ವಿಮರ್ಶೆ ಕೊಡುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗಿದೆ.
‘ರಾಜಾ ಸಾಬ್’ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಥಮನ್ ಅವರು ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಸಂಜಯ್ ದತ್, ಬೋಮನ್ ಇರಾನಿ, ಮಾಳವಿಕಾ ಮೋಹನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಸಿನಿಮಾ ನೋಡಿದ ಅನೇಕರು ನೆಗೆಟಿವ್ ವಿಮರ್ಶೆ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಜನ ನಾಯಕನ್’ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ‘ರಾಜಾ ಸಾಬ್’ ಮತ್ತು ‘ಶಂಕರ ವರ ಪ್ರಸಾದ್’
‘ದಿ ರಾಜಾ ಸಾಬ್’ ನೋಡಿದ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ‘ರಾಧೆ ಶ್ಯಾಮ್’ ನಂತರ ‘ಹರಿ ಹರ ವೀರ ಮಲ್ಲು’, ಈಗ ರಾಜಾ ಸಾಬ್ ಎಂದು ಅನೇಕರು ಹೇಳಿದ್ದಾರೆ. ‘ಅದೇನು ಗ್ರಾಫಿಕ್ಸ್, ಅದೇನು ವಿಶ್ಯುವಲ್ಸ್, ನಿದ್ದೆ ಬಂದೋಯ್ತು’ ಎಂದು ಕೆಲವರು ಹೇಳಿದ್ದಾರೆ. ಇನ್ನು, ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿದೆ. ಇದು ಸಿನಿಮಾಗೆ ಹಿನ್ನಡೆ ಆಗುತ್ತಿದೆ. ಹಳೆಯ ಕಾಲದ ಬರವಣಿಗೆ, ಗುರಿರಹಿತ ನಿರ್ದೇಶನ, ಕಳಪೆ ಸಂಗೀತ, ಅನಗತ್ಯವಾದ ಅತಿರಂಜಿತ ಭವ್ಯತೆ ಸಿನಿಮಾಗೆ ಹಿನ್ನಡೆ ತಂದಿದೆ.
#ರಾಜಾಸಾಬ್ ವಿಮರ್ಶೆ #ರಾಜಾಸಾಬ್
ಅಸಲಾ ಎಮ್ಮನಾ ಗ್ರಾಫಿಕ್ಸ್ ಆ ಎಮ್ಮನಾ ದೃಶ್ಯಗಳು ಆ ಉನ್ನತ ದರ್ಜೆಯ ಚಲನಚಿತ್ರವು ಮಂಚಿಯ ನಿದ್ರೆ ಎಸಿಯ ರಾವೊಚುಯು😭 pic.twitter.com/dlnQtFt9oo— g͟ARUDA.999⚓️🦅🦚 (@KingLudochamp) ಜನವರಿ 8, 2026
ರಾಧೆ ಶ್ಯಾಮ್ > HHVM > ರಾಜಾಸಾಬ್ ಅದು ಇಲ್ಲಿದೆ🔥#ವಿಪತ್ತು ರಾಜಾಸಾಬ್ #ದಿ ರಾಜಾಸಾಬ್ #ರಾಜಸಾಬ್ರೆವ್ಯೂ pic.twitter.com/uuvX3xD3H8
— ಹೇಮಂತ್🔱🦁 (@hemo9644) ಜನವರಿ 8, 2026
ಮೇವರಿಕ್ ಮಾರುತಿಗೆ ಸಾಕಾಗದ ಎನರ್ಜಿಟಿಕ್ ಪ್ರಭಾಸ್ ಅಭಿನಯ!!#ದಿ ರಾಜಾಸಾಬ್ #ರಾಜಾಸಾಬ್ ವಿಮರ್ಶೆ pic.twitter.com/WOUEHI3rQJ
— baddhakist_thelazygenius (@BaddhakistT) ಜನವರಿ 8, 2026
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿತು. ಇದಾದ ನಂತರ ಅವರು ಹೀರೋ ಆಗಿರಲಿಲ್ಲ. ಈಗ ‘ರಾಜಾ ಸಾಬ್’ ಮೂಲಕ ದೊಡ್ಡ ಸೋಲು ಕಾಣುವ ಸೂಚನೆ ಕೊಟ್ಟಿದೆ. ಮೊದಲ ದಿನ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.