Headlines

ನಾನು ನಿರಂತರ ವಿರೋಧ ಪಕ್ಷ ; ಸಿಎಂ ಸಿದ್ದರಾಮಯ್ಯಗೆ ಪ್ರಕಾಶ್ ರಾಜ್‌ ಅಚ್ಚರಿಯ ಸಲಹೆ!

ನಾನು ನಿರಂತರ ವಿರೋಧ ಪಕ್ಷ ; ಸಿಎಂ ಸಿದ್ದರಾಮಯ್ಯಗೆ ಪ್ರಕಾಶ್ ರಾಜ್‌ ಅಚ್ಚರಿಯ ಸಲಹೆ!

ನಾನು ನಿರಂತರ ವಿರೋಧ ಪಕ್ಷ ; ಸಿಎಂ ಸಿದ್ದರಾಮಯ್ಯಗೆ ಪ್ರಕಾಶ್ ರಾಜ್‌ ಅಚ್ಚರಿಯ ಸಲಹೆ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರ ಮೇಲಿನ ಭ್ರಷ್ಟಾಚಾರದ ಆರೋಪಗಳು ಅವರಿಗೆ ಶೋಭೆ ತರುವುದಿಲ್ಲ, ಆದ್ದರಿಂದ ಅವರು ಆಡಳಿತದ ಮೇಲೆ ಹಿಡಿತ ಸಾಧಿಸಬೇಕು ಎಂದು ನಟ ಪ್ರಕಾಶ್ ರಾಜ್ ಉಡುಪಿಯಲ್ಲಿ ಸಲಹೆ ನೀಡಿದ್ದಾರೆ. ತಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಇದು ಅವರಿಗೆ ಶೋಭೆಯಲ್ಲ, ಅವರು ಆಡಳಿತದ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ನಂತರ ಸುದೀರ್ಘಾವಧಿಯ ಸಿಎಂ ಸಿದ್ದರಾಮಯ್ಯ ದಾಖಲೆ ವಿಚಾರಕ್ಕೆ ಪ್ರತಿಕ್ರಿಯಿಸಿದರು, ದಾಖಲೆ ಎಲ್ಲರೂ ಮಾಡುತ್ತಾರೆ. ಅರಸು ಅವರ ಕಾಲಘಟ್ಟವೇ ಬೇರೆ ಸಿದ್ದರಾಮಯ್ಯ ಕಾಲಘಟ್ಟವೇ ಬೇರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಡಳಿತದ ಮೇಲೆ ಸಿದ್ದರಾಮಯ್ಯನವರು ಹಿಡಿತ ಇಟ್ಟುಕೊಂಡರೆ ಒಳ್ಳೆಯದು, ಅವರ ಆಪ್ತರ ಮೇಲೆ ಇರುವ ಭ್ರಷ್ಟಾಚಾರದ ಆರೋಪಗಳು ಮುಖ್ಯಮಂತ್ರಿಗೆ ಶೋಭೆಯಲ್ಲ, ಎಲ್ಲವನ್ನು ಸರಿ ಮಾಡಿ ಪಾರದರ್ಶಕವಾಗಿರಲಿ ಎಂದು ಮುಖ್ಯಮಂತ್ರಿಗಳಿಗೆ ಪ್ರಕಾಶ್ ರಾಜ್ ಸಲಹೆ ನೀಡಿದರು.

ಇದನ್ನೂ ಓದಿ: ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್: ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾದ ಕುಂದಾಪುರದ ಸನಿತ್ ಶೆಟ್ಟಿ

ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕರು ಒಳ್ಳೆಯದಾಗಲಿ, ಅಭಿನಂದನೆಗಳು ಎಂದ ಪ್ರಕಾಶ್‌ ರಾಜ್ ನಾನು ಬರಿ ಹೊಗಳು ಭಟ್ಟ ಅಲ್ಲ, ಪ್ರಶ್ನೆಯನ್ನು ಕೇಳುತ್ತೇನೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ನಾನು ನಿರಂತರ ವಿರೋಧ ಪಕ್ಷ ಎಂದು ಹೇಳಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೇ. 8 ಮೀಸಲಾತಿ; ಬಂಪರ್ ಸುವರ್ಣವಕಾಶ

Source link

Leave a Reply

Your email address will not be published. Required fields are marked *