ರಾಜ್ಯ ರಾಜಕಾರಣದ ಮೇಲೆ ಕಣ್ಣು: ಹೇಗಿದೆ ಗೊತ್ತಾ ನಿಖಿಲ್​​, ಪ್ರತಾಪ್​​, ಸುಮಲತಾ ಪ್ಲ್ಯಾನ್​​?

ರಾಜ್ಯ ರಾಜಕಾರಣದ ಮೇಲೆ ಕಣ್ಣು: ಹೇಗಿದೆ ಗೊತ್ತಾ ನಿಖಿಲ್​​, ಪ್ರತಾಪ್​​, ಸುಮಲತಾ ಪ್ಲ್ಯಾನ್​​?


ಪ್ರತಾಪ್ ಸಿಂಹ, ಸುಮಲತಾ ಮತ್ತು ನಿಖಿಲ್.

ಬೆಂಗಳೂರು, ಜನವರಿ 09: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಲವು ನಾಯಕರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ . ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು, ರಣತಂತ್ರ ಹೇಗಿರಬೇಕು ಎಂಬ ಬಗ್ಗೆ ಲೆಕ್ಕಾಚಾರ ನಡೆಸುತ್ತಿದೆ. ಈ ಪಟ್ಟಿಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಸುಮಲತಾ ಹೆಸರು ಕೇಳಿಬಂದಿತ್ತು. ಇದಕ್ಕೀಗ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರೂ ಸೇರ್ಪಡೆಯಾಗಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಪುಟಿದೆಳಲು ಜೆಡಿಎಸ್ ಯುವ ನಾಯಕ ತೆರೆಮರೆಯ ತಯಾರಿ.

ಮಂಡ್ಯ ಅಥವಾ ಮದ್ದೂರು ಮೇಲೆ ನಿಖಿಲ್ ಕಣ್ಣು?

2028ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ನಿಖಿಲ್, ಮಂಡ್ಯಕ್ಕೆ ಮತ್ತೆ ಎಂಟ್ರಿ ಕೊಡಲು ಪ್ಲ್ಯಾನ್ ಮಾಡಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದಿದ್ದ ನಿಖಿಲ್ ಪರಾಭವಗೊಂಡಿದ್ದರು. ಈ ನಡುವೆ ಇಲ್ಲಿಂದಲೇ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದೇ ಇವರದ್ದು. ಹೀಗಾಗಿ ಮಂಡ್ಯದಲ್ಲೇ ಮನೆ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ಒಲವು ಪ್ರದರ್ಶಿಸಿದ್ದಾರೆ. ರಾಮನಗರಕ್ಕಿಂತ ಮಂಡ್ಯವೇ ಸುಲಭ ಎಂಬುದು ಜೆಡಿಎಸ್ ಲೆಕ್ಕಾಚಾರವೂ ಆಗಿರುವ ಕಾರಣ ಈ ಹಿನ್ನೆಲೆ ಮತ್ತೆ ಮಂಡ್ಯಕ್ಕೆ ಬರಲು ನಿಖಿಲ್‌ಗೆ ಸಿದ್ಧತೆ ಇದೆ. ಸದ್ಯ ಮಂಡ್ಯದಲ್ಲಿ ಮನೆ ಹುಡುಕಲು ಬೆಂಬಲಿಗರಿಗೆ ನಿಖಿಲ್ ಸೂಚಿಸಿದ್ದು, ವಾರಕ್ಕೊಮ್ಮೆ ಮಂಡ್ಯದಲ್ಲೇ ಉಳಿಯಲು ನಿರ್ಧರಿಸಿದ್ದಾರಂತೆ. ಈ ಹಿಂದೆ ವಾರಕೊಮ್ಮೆ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೆಚ್ಡಿಕೆ ಹೇಳಿದ್ದರೂ ಅಪರೂಪಕ್ಕೊಮ್ಮೆ ಮಾತ್ರ ಮಂಡ್ಯ ಜಿಲ್ಲೆಗೆ ಬರುತ್ತಿದೆ. ಕೇಂದ್ರ ಸಚಿವ ಜವಾಬ್ದಾರಿ, ಅನಾರೋಗ್ಯದಿಂದ ವಾರಕ್ಕೊಮ್ಮೆ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ಮಗನ ಮೂಲಕ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು HDK ಕೂಡ ಚಿಂತನೆ ಇದೆ.

ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಸರ್ಕಾರ; ವಿಶೇಷ ಅಧಿವೇಶನ ಕರೆಯಲು ತೀರ್ಮಾನ

ಇನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಜನವರಿ 5 ರಂದು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದ ಹೆಜ್ಜೆ ಇಡಬೇಕೆಂದು ಪರೋಕ್ಷವಾಗಿ ಹೇಳಿದ್ದ ಪ್ರತಾಪ್ , ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಮಾಜಿ ಸಂಸದೆ ಸುಮಲತಾ ಕೂಡ ರಾಜ್ಯ ರಾಜಕಾರಣದ ಒಲವು ತೋರಿದ್ದು, ಮುಂದಿನ ಚುನಾವಣಾ ರಾಜಕೀಯದ ನಾಯಕರ ಜೊತೆ ಚರ್ಚಿಸುವ ಬಗ್ಗೆ ನಮ್ಮ ಪಕ್ಷದ ನಾಯಕರ ಜೊತೆ ಚರ್ಚಿಸಿದ್ದಾರೆ. ಆದರೆ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುವ ಇರಾದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *