ತುಮಕೂರು ಜನರಿಗೆ ಗುಡ್​​ನ್ಯೂಸ್​: ಮೆಟ್ರೋ ಮಾರ್ಗದ ಕಾಮಗಾರಿ ಆರಂಭ, ಯಾವೆಲ್ಲ ಮಾರ್ಗದಲ್ಲಿ ಸಂಚಾರಿಸಲಿದೆ?

ತುಮಕೂರು ಜನರಿಗೆ ಗುಡ್​​ನ್ಯೂಸ್​: ಮೆಟ್ರೋ ಮಾರ್ಗದ ಕಾಮಗಾರಿ ಆರಂಭ, ಯಾವೆಲ್ಲ ಮಾರ್ಗದಲ್ಲಿ ಸಂಚಾರಿಸಲಿದೆ?


ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಅಧಿಕೃತವಾಗಿ ಘೋಷಣೆ

ಬೆಂಗಳೂರು, ಜ.9: ಬಹುಕಾಲ ಬೇಡಿಕೆಯಾಗಿರುವ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯು ಅಧಿಕೃತವಾಗಿ ಘೋಷಣೆಯಾಗಿದೆ, ಇದೀಗ ಅಡಿಪಾಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ಮಹತ್ವಾಕಾಂಕ್ಷೆಯ ಅಂತರ್ ಜಿಲ್ಲಾ ಕಾರಿಡಾರ್ ಬಗ್ಗೆ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ನಿರ್ಮಾಣ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ವಿಸ್ತರಣೆಯಾಗಿದೆ ಎಂದು ಅಧಿಕಾರಿಗಳು ವೆಚ್ಚ ಹೇಳಿದ್ದಾರೆ. ಈ ಯೋಜನೆ ಬಂದರೆ ಹಾಗೂ ತುಮಕೂರು ಜನರಿಗೆ ಹೆಚ್ಚು ಪ್ರಯೋಜನವನ್ನು ಬೆಂಗಳೂರು ಎಂದು ಹೇಳಿದ್ದಾರೆ.

ಈ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ, ಆರ್ವಿ ಎಂಜಿನಿಯರಿಂಗ್ ಕಾನ್ಸಲ್ ಟೆಂಟ್ಸ್‌ಗೆ ಡಿಪಿಆರ್ ಸಲಹಾ ಕಾರ್ಯವನ್ನು ನೀಡಿದೆ. ಸಂಸ್ಥೆಯು 1.2 ಕೋಟಿ ರೂ. ವೆಚ್ಚದ 59.60 ಕಿಮೀ ಉದ್ದದ ಮೆಟ್ರೋ ಮಾರ್ಗಕ್ಕಾಗಿ ಡಿಪಿಆರ್ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಟೆಂಡರ್‌ಗಳನ್ನು ನವೆಂಬರ್ 2025 ರಲ್ಲಿ ಕರೆಯಲಾಯಿತು. ಇನ್ನು ಈ ಕಾರಿಡಾರ್‌ಗಾಗಿ ಅಧಿಕಾರಿಗಳು ಹಾಗೂ ಅಧಿಕಾರಿಗಳು ಕ್ಷೇತ್ರಮಟ್ಟದ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಹಾಗೂ ನಮ್ಮ ಮೆಟ್ರೋದ 4ನೇ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯು 20,649 ಕೋಟಿ ರೂ. ವೆಚ್ಚ ಸರಿ ಎಂದು ಅಂದಾಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚವಾಣ್ ದಿ ಹಿಂದೂಗೆ ಪ್ರಾರಂಭಿಸಿದರು.

ಈಗ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಇದರ ವಿಸ್ತರಣೆಯ ಬಗ್ಗೆಯೂ ಚರ್ಚೆಗಳು ಎಂದು ಹೇಳಿದ್ದಾರೆ. ಬೆಂಗಳೂರು-ತುಮಕೂರು ಮೆಟ್ರೋವನ್ನು ನಮ್ಮ ಮೆಟ್ರೋಡ್ 4 ನೇ ಹಂತದ ವಿಸ್ತರಣೆಯ ಭಾಗವಾಗಿ ಯೋಜಿಸಲಾಗಿದೆ ಮತ್ತು ಇದು ರಾಜ್ಯದ ಸಾರಿಗೆ ಮಾರ್ಗದಲ್ಲಿ ಅತ್ಯಂತ ದುಬಾರಿ ಯೋಜನೆಗಳಲ್ಲಿದೆ.

ಯೋಜನೆಯ ಪ್ರಮುಖ ವಿವರಗಳು:

ಒಟ್ಟು ಮಾರ್ಗದ ಉದ್ದ: 59.60 ಕಿ.ಮೀ.

ಅಂದಾಜು: 20,649 ಕೋಟಿ ರೂ.

ಒಟ್ಟು ನಿಲ್ದಾಣಗಳು: 26

ಪ್ರಯಾಣ: ಮಾದವರ (ಬೆಂಗಳೂರು)ನಿಂದ ನಾಗಣ್ಣನಪಾಳ್ಯ (ತುಮಕೂರು)ವರೆಗೆ

ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್‌ಗೆ ಬಿಡ್ ಕರೆದ ಬಿಎಂಆರ್ ಸಿಎಲ್

ಈ ಕಾರಿಡಾರ್ ನಂತರ, ಬೆಂಗಳೂರಿನ ವಾಯುವ್ಯವಲಯ ಮತ್ತು ನಗರ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ತುಮಕೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಡಿಪಿಆರ್‌ನೊಂದಿಗೆ ಮಾತುಕತೆ ನಡೆಸಿ, ಮುಂದುವರಿದಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಈ ಹಿಂದೆ ವರದಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದಾರೆ. ನಿರ್ದಿಷ್ಟವಾಗಿ ತುಮಕೂರಿಗೆ ಪೂರ್ಣ ಪ್ರಮಾಣದ ಮೆಟ್ರೋ ಅಗತ್ಯವಿದೆಯೇ ಎಂದು ಹೇಳಲಾಗಿದೆ. ಈ ಯೋಜನೆ ಮುಗಿದ ನಂತರ ಅದನ್ನು ಕೂಡ ವಿಸ್ತರಣೆ ಮಾಡಲಾಗವುದು ಎಂದು ಹೇಳಿದ್ದಾರೆ.

ಕಾರಿಡಾರ್‌ನಲ್ಲಿ ಯೋಜಿಸಲಾದ ಕೆಲವು ಪ್ರಮುಖ ನಿಲ್ದಾಣಗಳು:

ಮಕಾಲಿ

ದಾಸನಪುರ

ನೆಲಮಂಗಲ

ನೆಲಮಂಗಲ ಟೋಲ್ಗೇಟ್

ಟಿ. ಬೇಗೂರ್

ತಿಪ್ಪಗೊಂಡನಹಳ್ಳಿ

ಸೋಂಪುರ ಕೈಗಾರಿಕಾ ಪ್ರದೇಶ

ಡಾಬ್ಸ್‌ಪೇಟೆ

ಹಿರೇಹಳ್ಳಿ ಕೈಗಾರಿಕಾ ಪ್ರದೇಶ

ಕ್ಯಾತ್ಸಂದ್ರ

ತುಮಕೂರು ಬಸ್ ನಿಲ್ದಾಣ

ತುಡಾ ಲೇಔಟ್

ನಾಗಣ್ಣನಪಾಳ್ಯ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *