ಚಿರಾಲ, ಜನವರಿ 09: ಚಿರಾಲದಿಂದ ರೆಪಲ್ಲೆಗೆ ಹೋಗುತ್ತಿದ್ದ ಆರ್ ಟಿಸಿ ಬಸ್ ನಿಯಂತ್ರಣ ತಪ್ಪಿ ಕೆರೆಗೆ ಜಾರಿರುವ ಘಟನೆ ನಡೆದಿದೆ. ರಸ್ತೆಯ ತಿರುವು ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ಬಸ್ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಯಾರಿಗೂ ಗಾಯಗಳಲ್ಲ ಎಂಬುದು ಸಮಾಧಾನಕರ ಸಂಗತಿ. ವಿಡಿಯೋದಲ್ಲಿ ಕೆರೆಯಲ್ಲಿರುವ ಬಸ್ಸನ್ನು ನೀವು ಕಾಣಬಹುದು. ಬಸ್ಸಿನಲ್ಲಿ ಪ್ರಯಾಣಿಕರು ಕುಳಿತಲ್ಲೇ ಕುಳಿತಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ