ಬೆಂಗಳೂರು, ಜನವರಿ 09: ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಂಟಿ ನಿರ್ದೇಶಕ ರಾಜಾರಾಮ್ ಮೋಹನ್ ರಾವ್ ಚೆನ್ನು ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು (ಸಿಬಿಐ ದಾಳಿ) ಮಾಡಿದೆ. 9.5 ಲಕ್ಷ ರೂ. ಲಂಚಾ ಆರೋಪ ದಾಳಿ ಮಾಡಿದ್ದರೆ, ಈ ವೇಳೆ ಅವರ ನಿವಾಸದಲ್ಲಿ 3.59 ಕೋಟಿ ರೂ ನಗದು ಪತ್ತೆ ಆಗಿದೆ. ವಿದೇಶಿ ಕರೆನ್ಸಿ (ವಿದೇಶಿ ಕರೆನ್ಸಿ) ಮತ್ತು ಚಿನ್ನಾಭರಣಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಪ್ರಮುಖ ದಾಖಲೆಗಳು ವಶಕ್ಕೆ
ಲಂಚ ಹಿನ್ನೆಲೆ ದೂರು ದಾಖಲಿಸಲಾಗಿದೆ ಬೆಂಗಳೂರಿನಲ್ಲಿರುವ ರಾಜಾರಾಮ್ ಮೋಹನ್ ರಾವ್ ಚೆನ್ನು ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಂತರ ರೂ ನಗದು ಸೇರಿದಂತೆ ಯುಎಸ್ಡ್, ಹ್ಯಾಂಗ್ ಕಾಂಗ್, ಸಿಂಗಾಪುರ ಡಾಲರ್, ಇಂಡೋನೇಷ್ಯಾ ರುಪಿಯಾ, ಮಲೇಷಿಯನ್ ರಿಂಗಿಟ್, ಯುರೋ ಸೇರಿದಂತೆ ಯುವಾನ್ ವಿದೇಶಿ ಕರೆನ್ಸಿ ಮನೆಯಲ್ಲಿ ಪತ್ತೆ ಆಗಿದೆ. ಜೊತೆಗೆ ಆಭರಣಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜಾರಾಮ್ ಜೊತೆಗೆ ಅತುಲ್ ಖನ್ನಾ ಬಂಧನ
ಇನ್ನು ರಾಜಾರಾಮ್ ಮೋಹನ್ ರಾವ್ ಜೊತೆಗೆ ಸುಧೀರ್ ಗ್ರೂಪ್ ಆಫ್ ಕಂಪನಿಯ ನಿರ್ದೇಶಕರಾಗಿರುವ ಅತುಲ್ ಖನ್ನಾ ಕೂಡ ಬಂಧನವಾಗಿದೆ. ಸುಧೀರ್ ಗ್ರೂಪ್ ಆಫ್ ಕಂಪನಿಯು ವಿದ್ಯುತ್ ಉಪಕರಣಗಳಿಗೆ ಅನುಕೂಲಕರ ಪರೀಕ್ಷಾ ವರದಿಗಳನ್ನು ನೀಡಲು ಲಂಚ ಪಡೆದ ಹಿನ್ನೆಲೆ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾ ದಾಳಿ: ತಬ್ಬಿದ ಸಿಬ್ಬಂದಿ
ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಶಿವಮೊಗ್ಗ ನಗರ ಪಾಲಿಕೆ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ, ಟಪಾಲು ವಿಭಾಗದ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದೆ. ಲೋಕಾಯುಕ್ತ ದಾಳಿ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದರು.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಭೂಸ್ವಾಧೀನ ಪರಿಹಾರ ನೀಡದಕ್ಕೆ NHAI ಕಚೇರಿ, ಡಿಸಿ ಕಾರು ಜಪ್ತಿ
ವಿಲೇವಾರಿಯಾಗದೇ ಇರುವ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳಿಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಕಚೇರಿಗಳು ಬೀಗ ಹುಡುಕುತ್ತಿರುವುದನ್ನು ನೋಡಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡರು. ಮಹಾನಗರ ಪಾಲಿಕೆ ಸಿಬ್ಬಂದಿ ಐಡಿ ಕಾರ್ಡ್ ಹಾಕದೆ ಇರುವುದಕ್ಕೂ ತರಾಟೆಗೆ ತೆಗೆದುಕೊಂಡರು. ದಿನನಿತ್ಯ ನಿರ್ವಹಿಸುವ ಕಾರ್ಯದ ಬಗ್ಗೆ ಮಾಹಿತಿ ಇಲ್ಲದೆ ಸಿಬ್ಬಂದಿ ಪರದಾಡಿದರು. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಗೆ ಲೋಕಾಯುಕ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.