‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಶೋನಲ್ಲಿ ಅಶ್ವಿನಿ ಗೌಡ (ಅಶ್ವಿನಿ ಗೌಡ)ಗಿಲ್ಲಿ ನಟ, ಕಾವ್ಯ ಶೈವ, ಧ್ರುವಂತ್, ಮ್ಯೂಟೆಂಟ್ ರಘು, ಧನುಷ್, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ ಅವರು ಕೊನೆಯ ತನಕ ಬಂದಿದ್ದಾರೆ. ಗಿಲ್ಲಿ ನಟ ಅವರಿಗೆ ವಿಪರೀತ ಫ್ಯಾನ್ ಫಾಲೋಯಿಂಗ್ ಸೃಷ್ಟಿಯಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (ಪ್ರಶಾಂತ್ ಸಂಬರಗಿ) ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
‘ನನಗೆ ಮೊದಲು ಹತ್ತು ದಿನ ಅಶ್ವಿನಿ ಗೌಡ ಅವರು ಇಷ್ಟ ಆಗಲಿಲ್ಲ. ಅಹಂಕಾರ, ಜಂಭ, ಕೊಬ್ಬು ಇತ್ತು. ಮಾತಿನಲ್ಲಿ ಹಿಡಿತ ಇರಲಿಲ್ಲ. ಬೇರೆಯವರಿಗೆ ಅವರು ಗೌರವ ಕೊಡುತ್ತಾರೆ. ಆದರೆ ಕ್ರಮೇಣ ಅವರ ಮೇಲೆ ಪ್ರೀತಿ, ಮರ್ಯಾದೆ, ಅನುಕಂಪ ಶುರು ಆಯಿತು. ಎಲ್ಲರೂ ಅವರನ್ನೇ ಟಾರ್ಗೆಟ್ ಮಾಡಿದಾಗ ತುಂಬಾ ಟ್ರೋಲ್ ಆಗಿದೆ. ಅದು ಅವರಿಗೆ ಗೊತ್ತಿಲ್ಲ. ಸುದೀಪ್ ಅವರು ಹೇಳಿದ್ದನ್ನು ಕೇಳಿ ಅಶ್ವಿನಿ ಗೌಡ ತಿದ್ದಿದ್ದಾರೆ’ ಎಂದು ಪ್ರಶಾಂತ್ ಸಂಬರ್ಗಿ.
‘ಗಿಲ್ಲಿ ನಟ ಕಾಮಿಡಿಯನ್ ಆಗಿ ನನಗೆ ಮೊದಲಿನಿಂದಲೂ ಇಷ್ಟ ಆಗುತ್ತಾರೆ. ನಾನು ಗಿಲ್ಲಿಯನ್ನು ಬಿಟ್ಟು ಕೊಡೋಕೆ ಆಗಲ್ಲ. ಆದರೆ ಅಶ್ವಿನಿ ಅವರು ಗಟ್ಟಿ ಮನಸ್ಸು, ಇಷ್ಟು ದಿನ ಫೈಟ್ ಮಾಡಿದ್ದಾರೆ. ಇಲ್ಲ ಅವರ ಮೇಲೆ ನನಗೆ ಪ್ರೀತಿ, ಅಭಿಮಾನ ಮೂಡಿದೆ. ಆದರೆ ಗೆಲ್ಲೋದು ಗಿಲ್ಲಿಯೇ’ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
‘ಆರಂಭದಲ್ಲಿ ಅಶ್ವಿನಿ ಗೌಡ ಬಹಳ ಗಲಾಟೆ ಮಾಡುತ್ತಿದ್ದರು. ಎಲ್ಲರನ್ನೂ ಅವರು ಎದುರು ಹಾಕಿಕೊಳ್ಳುತ್ತಾರೆ. ತುಂಬಾ ಗಲಾಟೆ ಮಾಡುವವರನ್ನು ಜನರು ಇಷ್ಟಪಡುವುದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಆಗುತ್ತದೆ. ನೀವು ಒಬ್ಬರೇ ಆದಾಗ ಮಾನಸಿಕವಾಗಿ ಕುಗ್ಗುತ್ತೀರಿ. ಅಶ್ವಿನಿ ಗೌಡ ಅವರು ಆರಂಭದಲ್ಲಿ ಫುಲ್ ವೇಗದಲ್ಲಿ ಪೆಟ್ರೋಲ್ ಖಾಲಿ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಚೆನ್ನಾಗಿ ಆಡಿದ್ದಾರೆ. ಅವರು ಆಟ ಬದಲಾಯಿಸಿದ್ದಾರೆ. ನಾನು ನನ್ನ ಅಭಿಪ್ರಾಯ ಬದಲಾಯಿಸಿಕೊಂಡಿದ್ದೇನೆ’ ಪ್ರಶಾಂತ್ ಸಂಬರ್.
ಇದನ್ನೂ ಓದಿ: ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಈ ಬಾರಿಯಾದರೂ ಮಹಿಳಾ ಸ್ಪರ್ಧಿಗೆ ಬಿಗ್ ಬಾಸ್ ಕಪ್ ಸಿಗುತ್ತಾ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಇದೆ. ಆದರೆ ಪ್ರಶಾಂತ್ ಸಂಬರ್ಗಿ ಅವರು ಈ ಬಾರಿ ಒಮ್ಮೆ ಗಿಲ್ಲಿಯೇ ವಿನ್ ಆಗುತ್ತಾರೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ನೂರಾರು ದಿನಗಳ ಜರ್ನಿ ಮುಕ್ತಾಯ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.