
ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್‌ನಲ್ಲಿ 18 ರನ್‌ಗಳ ಅವಶ್ಯಕತೆಯಿದ್ದಾಗ, ಡಿ ಕ್ಲರ್ಕ್ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವಿಗೆ ಕಾರಣವಾಯಿತು.
ಮುಂಬೈ (ಜ.9): ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವುಮೆನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ ತಂಡ ಅತ್ಯಂತ ರೋಚಕ ಗೆಲುವು ಕಂಡಿದೆ. ಕೊನೇ ಓವರ್‌ನಲ್ಲಿ ಗೆಲುವಿಗೆ ಬೇಕಿದ್ದ 18 ರನ್‌ಗಳನ್ನು ಏಕಾಂಗಿಯಾಗಿ ಬಾರಿಸಿದ ದಕ್ಷಿಣ ಆಫ್ರಿಕಾ ಮೂಲದ ಆಲ್ರೌಂಡರ್ 25 ವರ್ಷದ ನಡನ್ ಡಿ ಕ್ಲರ್ಕ್ ಆರ್‌ಸಿಬಿಯ ರೋಚಕ ಗೆಲುವಿಗೆ ಕಾರಣರಾದರು. ಕೊನೇ ಓವರ್‌ನವರೆಗೂ ಆರ್‌ಸಿಬಿ ಪಂದ್ಯ ಗೆಲ್ಲುವ ಯಾವ ಲಕ್ಷಣಗಳೂ ಇದ್ದಿರಲಿಲ್ಲ. ಆದರೆ, ಇಂಗ್ಲೆಂಡ್‌ನ ಅನುಭವಿ ಬೌಲರ್ ಸ್ಕ್ರೀವರ್ ಬ್ರಂಟ್ ದಾಳಿಯನ್ನು ಚೆಂಡಾಡಿದ ನಡಿನ್ ಡಿ ಕ್ಲರ್ಕ್ ಆರ್‌ಸಿಬಿಗೆ ರೋಚಕ 3 ವಿಕೆಟ್ ಗೆಲುವಿಗೆ ಕಾರಣರಾದರು. ಹಾಲಿ ಚಾಂಪಿಯನ್ ವಿರುದ್ಧ ಅಮೋಘ ಗೆಲುವಿನೊಂದಿಗೆ 2024ರ ಚಾಂಪಿಯನ್ ಆರ್‌ಸಿಬಿ ಟೀಮ್ 2026ರ WPL ಶುಭಾರಂಭ ಮಾಡಿದೆ.