ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ!

ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ!


ಬೆಂಗಳೂರು, ಜನವರಿ 10: ಬೆಂಗಳೂರು (ಬೆಂಗಳೂರು) ನಗರದ ಬಡಾವಣೆಯ ಬಿ-ಖಾತಾ ನಿವೇಶನಗಳು, ಕಟ್ಟಡಗಳು ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕೃತ ಅಪಾರ್ಟ್‌ಮೆಂಟ್‌ಗಳಿಗೆ ಫ್ಲಾಟ್‌ಗಳಿಗೆ ಎ-ಖಾತಾ ಸೌಲಭ್ಯ ಸಿಗಲಿದೆ. ಕಾಯ್ದೆ 1961 ಅನ್ನು ಉಲ್ಲಂಘಿಸಿ ನಿರ್ಮಿಸಿರುವ ಅಧಿಕೃತ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ಗಳಿಗೆ ಫ್ಲಾಟ್‌ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶವಿದೆ. ಜೊತೆಗೆ ಸುಮಾರು 10 ಲಕ್ಷ ಬಿ ಖಾತಾ ಆಸ್ತಿಗಳಿವೆ. ಜಿಬಿಎ ವಿಧಿಸಲಾಗಿದ್ದ ನಿಯಮಗಳನ್ನೇ ಉಳಿದ ಕಡೆಗಳಿಗೆ ಅನ್ವಯಿಸಬೇಕಾಗಿದೆ. ಒತ್ತುವರಿ ಮತ್ತು ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡವನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎ ಖಾತಾ ನೀಡಲು ಏನು?

  • ಅಪಾರ್ಟ್‌ಮೆಂಟ್ ಈ ವರ್ಷದ ಆಸ್ತಿ ತೆರಿಗೆ ಪಾವತಿ ಮಾಡಬೇಕು.
  • ಅಪಾರ್ಟ್‌ಮೆಂಟ್‌ಗೆ ನಕ್ಷೆ ಇರಬೇಕು.
  • ಸರ್ಕಾರ ಸೂಚಿಸಿದ ಮಾರ್ಗಸೂಚಿ ದರದ ಶೇಕಡಾ 5ರಷ್ಟು ಹಣ ಪಾವತಿ ಮಾಡಬೇಕು.
  • ಅಪಾರ್ಟ್‌ಮೆಂಟ್ ಲ್ಯಾಂಡ್‌ಗೆ ಬಿ ಖಾತಾ ಇರಬೇಕು.
  • ಅಪಾರ್ಟ್ಮೆಂಟ್ಗೆ ವೈಯಕ್ತಿಕವಾಗಿ ಇ ಖಾತಾ ಅಪ್ಲೈ ಮಾಡಬೇಕು.
  • ನಕ್ಷೆ ಮೀರಿ ಕಟ್ಟಡ ನಿರ್ಮಾಣ ಮಾಡಿದ್ರೆ ಮಾರ್ಗಸೂಚಿ ಬೆಲೆ ಶೇಕಡಾ 50ರಷ್ಟು ಹಣ ಪಾವತಿ ಮಾಡಬೇಕು.
  • ಆನ್‌ಲೈನ್ ಮುಖಾಂತರ ಈ ಖಾತೆಗೆ ಅರ್ಜಿ ಸಲ್ಲಿಸಬಹುದು.
  • ಸಲ್ಲಿಕೆ ಮಾಡಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಖಾತಾ ವಿತರಣೆ ಮಾಡುತ್ತಾರೆ.

ಮತ್ತೊಂದೆಡೆ, ಎ ಖಾತೆಗೆ ಪರಿವರ್ತನೆ ಮಾಡಿಕೊಡುವ ಈ ಯೋಜನೆ ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ. ಇದು ಕಾನೂನು ಪ್ರಕಾರ ಸರಿಯಾಗುವುದಿಲ್ಲ. ಜನರನ್ನು ದಾರಿ ತಪ್ಪಿಸುವಂಥ ಕೆಲಸ ಮಾಡುತ್ತಿದಾರೆ ಎಂಬ ಆರೋಪಗಳೂ ಹಲವೆಡೆ ಕೇಳಿಬರುತ್ತಿವೆ.

ಇದನ್ನೂ ಓದಿ: ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ: ಜನರ ಪ್ರಶ್ನೆಗಳಿಗೆ ಯಾರಿಗೂ ಉತ್ತರವೇ ಗೊತ್ತಿಲ್ಲ

ಒಟ್ಟಿನಲ್ಲಿ ರಾಜ್ಯದಲ್ಲಿ ಈ ಖಾತೆ ಅಡಿಯಲ್ಲಿ ಅನೇಕ ಸ್ವತ್ತುಗಳಿಗೆ ಎ ಖಾತಾದ ಭಾಗ್ಯ ಸಿಕ್ಕಿಲ್ಲ. ಆದರೆ ಅಪಾರ್ಟ್‌ಮೆಂಟ್‌ಗಳಿಗೆಮಾತ್ರ ಎ ಖಾತಾ ನೀಡುವ ಭರವಸೆ ಸರ್ಕಾರದಿಂದ ಆದಾಯ ಹೆಚ್ಚಳಕ್ಕೆ ಮುಂದಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *