ಮೈಸೂರು, ಜನವರಿ 10: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ಕಾಡಾನೆ ಅರಣ್ಯ ಇಲಾಖೆ ವಾಹನವನ್ನು ಚೇಸ್ ಮಾಡಿದ ಘಟನೆ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಅಂಚಿನ ಬಳಿ ರೈಲು ಕಂಬಿ ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶದಲ್ಲಿ ಒಂಟಿ ಸಲಗ ಸಂಚರಿಸುತ್ತಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಇರುವ ವಾಹನವನ್ನು ಕಂಡ ತಕ್ಷಣ ಕಾಡಾನೆ ಘೀಳಿಟ್ಟು ದೌಡಾಯಿಸಿದೆ. ಬ್ಯಾರಿಕೇಡ್ ಒಳಗಿಂದಲೇ ವಾಹನದತ್ತ ನುಗ್ಗಲು ಯತ್ನಿಸಿದ ಕಾಡಾನೆ, ಅಡ್ಡಿಯಿದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿಲ್ಲ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ