BBK 12 Episode Elimination: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎಲ್ಲರಿಗೂ ಈ ವಾರ ಯಾರು ಔಟ್ ಆಗ್ತಾರೆ? ಯಾರು ಫಿನಾಲೆಗೆ ಹೋಗಲಿದ್ದಾರೆ ಎಂಬ ಕುತೂಹಲ ಇದೆ. ಹೀಗಿರುವಾಗ ಎರಡು ದಿನಗಳ ಹಿಂದೆ ಕಾವ್ಯ ಶೈವ ಅವರು ಎಲಿಮಿನೇಟ್ ಆದರು ಎನ್ನಲಾಗಿತ್ತು. ಆದರೆ ಅವರು ಎಲಿಮಿನೇಟ್ ಆಗಿಲ್ಲ.

ಹೌದು, ಇದು ಈ ಸೀಸನ್ನ ಕಿಚ್ಚನ ಕೊನೆಯ ಪಂಚಾಯಿತಿಯಾಗಿದ್ದು, ಶುಕ್ರವಾರವೇ ಎಪಿಸೋಡ್ ಶೂಟಿಂಗ್ ನಡೆದಿದೆ. ಇನ್ನು ಎಲಿಮಿನೇಶನ್ ಕೂಡ ಆಗಿದೆ. ಹಾಗಾದರೆ ಯಾರು ಔಟ್ ಆಗಿರಬಹುದು ಎಂಬ ಸಂಶಯ ಇರಬಹುದು.

ಅಶ್ವಿನಿ ಗೌಡ, ರಘು, ಗಿಲ್ಲಿ ನಟ, ಕಾವ್ಯ ಶೈವ, ಧನುಷ್ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರು ನಾಮಿನೇಟ್ ಆಗಿದ್ದರು. ಹೀಗಾಗಿ ಯಾರು ಹೋಗಬಹುದು ಎಂದು ಡೌಟ್ ಇತ್ತು. ಫಿನಾಲೆ ಹತ್ತಿರ ಬಂದಿದ್ದಕ್ಕೆ ಎಲ್ಲರೂ ಪ್ರಯತ್ನಪಟ್ಟು ಆಡುತ್ತಿದ್ದರು.

ಈ ಮಧ್ಯೆ ಕಾವ್ಯ ಶೈವ ಫ್ಯಾಮಿಲಿಯವರು ಮಾಡಿದ ಎಡವಟ್ಟಿಗೋಸ್ಕರ ಅವರು ಎಲಿಮಿನೇಟ್ ಆಗಬೇಕಿತ್ತು ಎಂದು ಕಿಚ್ಚ ಸುದೀಪ್ ಕೂಡ ಹೇಳಿದ್ದರು. ಆದರೂ ಕಾವ್ಯ ಔಟ್ ಆಗಿರಲಿಲ್ಲ. ಈಗ ಬೇರೆ ಸ್ಪರ್ಧಿಯೋರ್ವರು ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ರಾಶಿಕಾ ಶೆಟ್ಟಿ ಅವರು ಟಾಸ್ಕ್ಗಳನ್ನು ಚೆನ್ನಾಗಿ ಆಡಿದ್ದರು. ಫಿಸಿಕಲೀ ಇವರು ಸ್ಟ್ರಾಂಗ್ ಆಗಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೆ ರಾಶಿಕಾ ಅವರ ಬಿಗ್ ಬಾಸ್ ಜರ್ನಿ ಮುಗಿದಿದೆ ಎಂಬ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ರಾಶಿಕಾ ಶೆಟ್ಟಿ ಅವರು ಸೂರಜ್ ಸಿಂಗ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇನ್ನೇನು ಎಲಿಮಿನೇಟ್ ಆಗ್ತಾರೆ ಎಂದು ಬಿಗ್ ಬಾಸ್ ಫ್ರಾಂಕ್ ಮಾಡಿದ್ದರು. ಆಗ ಸೂರಜ್ ಅವರಿಗೆ ಲಾಂಗ್ ಹಗ್ ಕೊಟ್ಟಿದ್ದು ಟ್ರೋಲ್ ಆಗಿತ್ತು. ದೊಡ್ಮನೆಯೊಳಗಡೆ ಒಂದು ವಾರದಲ್ಲಿ ಇವರಿಬ್ಬರ ಆತ್ಮೀಯತೆ ಕೂಡ ಟ್ರೋಲ್ ಆಗಿತ್ತು.

Source link
BBK 12: ಅಯ್ಯೋ..! ಕಾವ್ಯ ಶೈವ ಬದಲು ಟಾಸ್ಕ್ಗಳನ್ನು ಆಡುತ್ತಿದ್ದ ಪ್ರಬಲ ಸ್ಪರ್ಧಿಯೇ ಔಟ್ ಆದ್ರು!