ಬೆಂಗಳೂರು, ಜ.10: ಪ್ರೀತಿಯನ್ನು ಒತ್ತಾಯದಿಂದ ಮಾಡಬಾರದು. ಬಲವಂತವಾಗಿ ಮಾಡುವ ಪ್ರೀತಿಯೂ ಯಾವತ್ತೂ ಶಾಶ್ವತವಾಗಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಲವಂತವಾಗಿ ಪ್ರೀತಿಸುವಂತೆ ಒತ್ತಾಯಿಸಿ ಕೊಲೆ ಮಾಡಿರುವ ಪ್ರಕರಣಗಳು ಹೆಚ್ಚಾಗುತ್ತವೆ. ಇದೀಗ ಅಂತಹದೇ ಒಂದು ಘಟನೆ ನಡೆದಿದೆ. ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಯುವತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿರುವ ನೆಲಮಂಗಲ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಯುವಕಯುವತಿ ಕೊಲ್ಲಲು ಆನ್ಲೈನ್ ಮೂಲಕ ಗನ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಯುವತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಲ್ಲಾಪುರದವಳು ಎಂದು ಹೇಳಲಾಗಿದೆ. ಈ ವಿಷಯ ತಿಳಿದು ಯುವತಿ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಈ ಯುವಕ ಗನ್ ಹಿಡಿದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಿಸಿಟಿವಿ ವಿಡಿಯೋವನ್ನು ನೋಡಿ ತನಿಖೆ. ಈ ವೇಳೆ ಹಾಡಹಗಲೇ ಗನ್ ಹಿಡಿದ ಯುವಕ ಗೊತ್ತಾಗಿದೆ. ಪ್ರೀತಿಗೆ ತಿರಸ್ಕಾರ ಮಾಡಿದ ಯುವತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಎಂದು ಹೇಳಿದ್ದಾರೆ. ಬಿಹಾರ ಮೂಲಕ ಯುವಕ ಎಂದು ಹೇಳಲಾಗಿದೆ. ಯುವತಿ ನೀಡಿದ ಮಾಹಿತಿ ಪ್ರಕಾರ ಎಲ್ಲ ಕಡೆ ಯುವಕನಿಗಾಗಿ ಹುಡುಕಿದ್ದಾರೆ. ಇದೀಗ ಗನ್ ಸಮೇತ ಬಿಹಾರ ಮೂಲದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅರ್ಪನಾ ಚೆಟ್ಟೀರ್ನ ಶುಭಂ ಎಂಬ 28 ವಯಸ್ಸಿನ ಬಿಹಾರದ ಮೂಲದ ಯುವಕ ಮೂರು ವರ್ಷದಿಂದ ಪ್ರೀತಿಸುತ್ತಿದ್ದಾಳೆ, ಆದರೆ ಈ ಪ್ರೀತಿಯನ್ನು ಅರ್ಪನಾ ಒಪ್ಪಿಲ್ಲ. ರೋಸ್ ರಾಯಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಮಾಡುತ್ತಿರುವ ಅರ್ಪನಾಗೆ ಪ್ರತಿದಿನ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದ, ಆದರೆ ಇದಕ್ಕೆ ಅರ್ಪನಾ ಒಪ್ಪಿಲ್ಲ. ಈ ಯುವಕ ಬೆಂಗಳೂರಿನಲ್ಲಿ ಪೀಜಾ ಡಿಲೀವ್ರಿ ಬಾಯ್ ಕೆಲಸ ಮಾಡುತ್ತಿದ್ದು, ಪ್ರೀತಿ ಮಾಡದೇ ಇದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ, ಈ ಹಿನ್ನೆಲೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ತಕ್ಷಣ ಹುಡುಗಿಯ ದೂರಿಗೆ ಪ್ರತಿಕ್ರಿಯೆ ತಿಳಿಸಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ