Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮನೆಯಿಂದ ದೂರ ಇದ್ದು, ವ್ಯಾಸಂಗ- ಉದ್ಯೋಗ ಮಾಡುತ್ತಾ ಇರುವವರು ಏಕಾಂತವನ್ನು ಬಯಸುವಿರಿ ಮತ್ತು ಆರ್ಥಿಕ ವಿಚಾರಗಳಲ್ಲಿ ನಿಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿಯಿರಿ. ಸಂಶೋಧನೆಾತ್ಮಕ ಕೆಲಸಗಳಿಗೆ ಇಂದಿನ ಶಕ್ತಿ ಪೂರಕವಾಗಿದೆ. ಆಧ್ಯಾತ್ಮಿಕ ಗುರುವಿನ ಭೇಟಿ ಅಥವಾ ದರ್ಶನ ಪಡೆಯುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸಾಧಾರಣ ಫಲಿತಾಂಶಗಳಿದ್ದರೂ ನಿಮ್ಮ ಉಳಿತಾಯದ ಯೋಜನೆಗಳು ಫಲ ನೀಡಲಿವೆ. ರಹಸ್ಯ ವಿಚಾರಗಳನ್ನು ಯಾರಿಗೂ ತಿಳಿಸಬೇಡಿ. ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಂದರ್ಭ ಬರಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕೆಲಸದ ಒತ್ತಡವನ್ನು ನೀಗಿಸಲು ಇಂದೇ ಸಿದ್ಧತೆ ಮಾಡಿಕೊಳ್ಳುವಿರಿ. ಕಬ್ಬಿಣ, ತೈಲ ಅಥವಾ ಸಿಮೆಂಟ್ ವ್ಯಾಪಾರಸ್ಥರಿಗೆ ದೊಡ್ಡ ಲಾಭ ಸಿಗಲಿದೆ. ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಕಠಿಣ ಶ್ರಮಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ನಿಮ್ಮ ಮೇಲೆ ಅಪವಾದ ಬರದಂತೆ ಎಚ್ಚರ ವಹಿಸಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಹಾದಿ ಗೋಚರಿಸಲಿದೆ. ಅಜೀರ್ಣ ಸಮಸ್ಯೆಯಾಗದಂತೆ ಆಹಾರದ ಮಿತಿಯಿರಲಿ. ಇಷ್ಟದೇವತೆಯ ಪ್ರಾರ್ಥನೆ ಶುಭ ನೀಡಲಿದೆ. ಮನೆಯಲ್ಲಿ ಕೆಲವು ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರುತ್ತದೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕತೆಗೆ ಬದಲಾಗಿ ತರ್ಕಕ್ಕೆ ಆದ್ಯತೆ ನೀಡಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಭೂಮಿಗೆ ಸಂಬಂಧಿಸಿದ ಹಳೆಯ ವ್ಯವಹಾರಗಳು ಲಾಭದಾಯಕವಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಶಾಂತವಾಗಿ ಮಾತನಾಡಿ ಪರಿಸ್ಥಿತಿಯನ್ನು ತಿಳಿಯಪಡಿಸಿ. ದೂರದ ಪ್ರಯಾಣದ ಯೋಜನೆಗಳಿದ್ದರೆ ಸದ್ಯಕ್ಕೆ ಮುಂದೂಡುವುದು ಒಳಿತು.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *