ಬನ್ಸ್ವಾರಾ, ಜನವರಿ 11: ಹದಿನಾರು ಆಸನಗಳಿರುವ ಜೀಪಿನಲ್ಲಿ ಬರೋಬ್ಬರಿ 20 ಮಂದಿ ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 16 ಆಸನಗಳ ಜೀಪಿನಲ್ಲಿ ಸುಮಾರು 60 ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ವಾಹನದೊಳಗಿನ ಎಲ್ಲಾ ಆಸನಗಳು ಭರ್ತಿಯಾಗಿದ್ದವು, ಆದರೆ ಹಲವಾರು ಪ್ರಯಾಣಿಕರು ಹೊರಗೆ ಬಾನೆಟ್, ಚಾಲಕನ ಬಾಗಿಲಿನ ಮೇಲೂ ನೇತಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಅಪಾಯಕಾರಿ ಪ್ರಯಾಣದಲ್ಲಿ ವೃದ್ಧರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸಹ ಇರುವುದು ಆತಂಕ ಮೂಡಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ