ಹಾಸನ, ಜನವರಿ 11: ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಕೊಡಗು ಭಾಗದಿಂದ ಬಂದಿರುವ ಒಂಟಿ ಸಲಗ ಕಾಫಿ ತೋಟದೊಳಗೆ ನುಗ್ಗಿ ಕಾರ್ಮಿಕರನ್ನು ಅಟ್ಟಾಡಿಸಿದೆ. ಕಾಡಾನೆ ಕಾಣದಂತೆ ಕಾರ್ಮಿಕರು ಕೂಗಾಡುತ್ತಾ ಜೀವ ಭಯದಿಂದ ಓಡಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಘೀಳಿಡುತ್ತಾ ಮನೆಗಳತ್ತ ಓಡಿದ್ದು, ಸಲಗ ಮನೆ ಬಾಗಿಲವರೆಗೂ ಹಿಂಬಾಲಿಸಿದೆ. ಕೊನೆಗೆ ಕಾರ್ಮಿಕರು ಮನೆಗಳೊಳಗೆ ಪ್ರವೇಶಿಸಿ ಜೀವ ಉಳಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.