ಹುಬ್ಬಳ್ಳಿ, ಜನವರಿ 11: ಮಹಿಳೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾಮುಕರು ಕೃತ್ಯದ ವಿಡಿಯೋ ಕೂಡ ಮಾಡಿಕೊಂಡಿದ್ದರು ಅದನ್ನು ಹರಿಬಿಟ್ಟಿದ್ದರು. ಇನ್ನು ಸಂತ್ರಸ್ತೆಗೆ ಅಗತ್ಯವಾಗಿ ನೀಡಲಾಗುತ್ತಿಲ್ಲ.
ಜ.9ರಂದು ನಡೆದಿರುವ ಘಟನೆ
ಘಟನೆ ಬಗ್ಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಘಟನೆ, ಜ.9ರಂದು ಅಂಬೇಡ್ಕರ್ ಮೈದಾನದಿಂದ ಇಬ್ಬರು ಯುವಕರು ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದಿದ್ದರು. ಮದ್ಯ ಕುಡಿಸಿ ಅನುಚಿತವಾಗಿ ವರ್ತಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಒಂದು ದಿನದ ನಂತರ ಮಹಿಳೆ ವಿಡಿಯೋಗೆ ಬಂದು ಅತ್ಯಾಚಾರ ಮಾಡಿ ಹರಿಬಿಟ್ಟ ಬಗ್ಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಆರೋಪಿಗಳಾದ ಶಿವಾನಂದ, ಗಣೇಶ್‌ಗೆ ಸ್ಥಳೀಯರು ಥಳಿಸಿದ್ದಾರೆ. ಕಟ್ಟಿಹಾಕಿ ತಲೆ ಬೋಳಿಸಿದ್ದಾರೆ. ಹಲ್ಲೆ ಸಂಬಂಧ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ; ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಪ್ರಮುಖ ಗಂಭೀರ
ಆರೋಪಿಗೆ ಥಳಿಸಿದವರ ಮೇಲೆ ಕೇಸ್ ಗೆ ಖಂಡನೆ
ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಥಳಿಸಿ ಪೊಲೀಸರಿಗೆ ನಾಲ್ವರ ವಿರುದ್ಧ ದೂರು ಒಪ್ಪಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿಯ ನಾಲ್ವರ ವಿರುದ್ಧ ಪ್ರಕರಣ ಖಂಡಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯರು ಕಿಡಿ ಕಾರಿದ್ದಾರೆ. ಆರೋಪಿಗಳನ್ನು ಹಿಡಿದು ಕೊಟ್ಟವರ ವಿರುದ್ಧ ಕೇಸ್ ಹಾಕಲಾಗಿದೆ, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:39 pm, ಭಾನುವಾರ, 11 ಜನವರಿ 26