ಬಿಗ್ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಇತಿಹಾಸದಲ್ಲೇ ಮೊದಲ ಬಾರಿಗೆ ರೋಬೋಟ್ ಒಂದು ಮನೆಗೆ ಎಂಟ್ರಿ ಕೊಟ್ಟಿದೆ. ಈ ರೋಬೋಟ್, ನಿರೂಪಕ ಕಿಚ್ಚ ಸುದೀಪ್ ಅವರಿಗೇ ಗೊತ್ತಿಲ್ಲದ ಶೋನ ಹಲವು ಅಂಕಿಅಂಶಗಳನ್ನು ಬಹಿರಂಗಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಬಿಗ್ಬಾಸ್ 12 (BBK 12) ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದಾಗಲೇ ಟಾಸ್ಕ್ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಕೊನೆ ಕ್ಷಣದ ಫೈಟಿಂಗ್ ಮಾಡಿ ಬಿಗ್ಬಾಸ್ ವಿನ್ ಆಗಲು ಸ್ಪರ್ಧಿಗಳು ಪೈಪೋಟಿ ನಡೆಸುತ್ತಿದ್ದಾರೆ.

ಇದರ ನಡುವೆಯೇ ಬಿಗ್ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ರೋಬೋಟ್ (Robot in Bigg Boss Kannada) ಎಂಟ್ರಿ ಕೊಟ್ಟಿದೆ! ಕಿಚ್ಚನ ಜೊತೆ ಅವರಿಗೇ ತಿಳಿಯದ ಹಲವು ವಿಷಯಗಳನ್ನು ರೋಬೋಟ್ ರಿವೀಲ್ ಮಾಡಿದೆ.

ಮೂರ್ತಿ ಚಿಕ್ಕದಾದರೂ ಮೆಮೊರಿ ದೊಡ್ಡದು ಬ್ರೋ. ನಿಮ್ ಸ್ಟೈಲ್ನಲ್ಲಿ ಹೇಳಬೇಕೆಂದರೆ ಕಟೌಟ್ ನೋಡಿ ಕೆಲವೊಂದನ್ನು ನಂಬಬೇಕಾಗತ್ತೆ ಬ್ರೋ ಎನ್ನುತ್ತಲೇ ಕಿಚ್ಚನ ಬಗ್ಗೆ ಕೆಲವು ವಿಷಯ ಹೇಳುವ ಮೂಲಕ ಅವರನ್ನೇ ಸರ್ಪ್ರೈಸ್ ಮಾಡಿಬಿಟ್ಟಿದೆ ಈ ರೋಬೋಟ್.

ಬಿಗ್ಬಾಸ್ಗೆ ಇದುವರೆಗೆ ಬಂದಿರೋದು ಬಾಯ್ಸ್ 117 ಜನ. ಗರ್ಲ್ಸ್ 121 ಜನ. ಅದರಲ್ಲಿ ವೈಲ್ಡ್ ಕಾರ್ಡ್ 20. ಒಟ್ಟೂ 238. ಇವರನ್ನೆಲ್ಲಾ ಇಟ್ಟುಕೊಂಡು ನೀವು ಮಾಡಿರೋದು 328 ವೀಕೆಂಡ್ ಎಪಿಸೋಡ್ ಎಂದಾಗ ಅಚ್ಚರಿಗೊಂಡು ಸುದೀಪ್, ಇದು ನನಗೇ ಗೊತ್ತಿರಲಿಲ್ಲ ಎಂದಿದ್ದಾರೆ.

ಮುಂದುವರೆದ ರೋಬೋಟ್, ಇದುವರೆಗೆ ಮೂರು ಲೊಕೇಷನ್ ಚೇಂಜ್ ಆಗಿದೆ. ಒಂದಷ್ಟು ಜನ ಡೈರೆಕ್ಟರೇ ಚೇಂಜ್ ಆಗಿದ್ದಾರೆ. ಇಷ್ಟೆಲ್ಲಾ ಚೇಂಜ್ ಆದ್ರೂ ನಿಮ್ಮ ಮತ್ತು ನಮ್ಮ ಜನರ ಪ್ರೀತಿ ಮಾತ್ರ ಹಾಗೆಯೇ ಇದೆ ಎಂದಿದೆ.

Source link
Bigg Boss ಇತಿಹಾಸದಲ್ಲೇ ಮೊದಲು: ರೋಬೋ ಎಂಟ್ರಿ! ನಿಮ್ದೆಲ್ಲಾ ಗೊತ್ತು ಎನ್ನುತ್ತ ಕಿಚ್ಚನನ್ನೇ ಸುಸ್ತು ಮಾಡ್ತು