ಬಾಯಲ್ಲಿ ಮಾತ್ರ 'ಹಣಿಶಿಣಮೆಣಶಿಣಕಾಯಿ', ಒಳಗೆ ಉಂಟಲ್ವಾ ರಸಗುಲ್ಲಾ: ರಕ್ಷಿತಾಗೆ ಅಶ್ವಿನಿ ಫುಲ್​ ಮಾರ್ಕ್ಸ್​!

ಬಾಯಲ್ಲಿ ಮಾತ್ರ 'ಹಣಿಶಿಣಮೆಣಶಿಣಕಾಯಿ', ಒಳಗೆ ಉಂಟಲ್ವಾ ರಸಗುಲ್ಲಾ: ರಕ್ಷಿತಾಗೆ ಅಶ್ವಿನಿ ಫುಲ್​ ಮಾರ್ಕ್ಸ್​!

ಬಾಯಲ್ಲಿ ಮಾತ್ರ 'ಹಣಿಶಿಣಮೆಣಶಿಣಕಾಯಿ', ಒಳಗೆ ಉಂಟಲ್ವಾ ರಸಗುಲ್ಲಾ: ರಕ್ಷಿತಾಗೆ ಅಶ್ವಿನಿ ಫುಲ್​ ಮಾರ್ಕ್ಸ್​!
ಬಿಗ್​ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಜಗಳದಿಂದಲೇ ಪರಿಚಿತರಾದ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಸ್ನೇಹವೂ ಅಷ್ಟೇ ವಿಶೇಷವಾಗಿದ್ದು, ತನ್ನ ಬಾಯಿ ಮೆಣಸಿನಕಾಯಿಯಂತೆ ಆದರೆ ಮನಸ್ಸು ರಸಗುಲ್ಲಾದಂತೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.
ಬಿಗ್​ಬಾಸ್​​ (Bigg Boss) ಮನೆಯಲ್ಲಿ ಸದ್ಯ ಇರುವ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಇನ್ನೇನು ಫಿನಾಲೆಗೆ ಕೆಲವೇ ದಿನಗಳು ಇರುವ ಹಿನ್ನೆಲೆಯಲ್ಲಿ, ಟಾಸ್ಕ್​ ಭರಾಟೆಯೂ ಜೋರಾಗಿದ್ದು, ಬಿಗ್​ಬಾಸ್ ವಿನ್​ ಆಗಲು ಇರುವ ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ.

ಇದರ ನಡುವೆಯೇ, ಗಲಾಟೆ, ಕಾದಾಟ, ಕೂಗಾಟ, ಕಿರುಚಾಟ ಕೂಡ ಸಹಜವಾಗಿ ಹೆಚ್ಚಾಗುತ್ತದೆ. ಆದರೆ ಅದೇನೇ ಇದ್ದರೂ ಅದು ಟಾಸ್ಕ್​ ಗೆಲ್ಲುವ, ಬಿಗ್​ಬಾಸ್​​ ವಿನ್​ ಆಗುವ ಆ ಕ್ಷಣದ ಕಿಚ್ಚು ಅಷ್ಟೇ. ಅದರ ಹೊರತಾಗಿ ಸ್ಪರ್ಧಿಗಳಲ್ಲಿ ಪ್ರೀತಿ, ಸ್ನೇಹ, ಗೆಳೆತನ, ವಿಶ್ವಾಸ ಎಲ್ಲವೂ ಇದ್ದೇ ಇರುತ್ತದೆ.

ಇದೀಗ ಮಂಗಳೂರು ಪುಟ್ಟಿ ಎಂದೇ ಫೇಮಸ್​ ಆಗಿರೋ ರಕ್ಷಿತಾ ಶೆಟ್ಟಿ (Bigg Boss Rakshita Shetty) ಮತ್ತು ಜಗಳದಿಂದಲೇ ಫೇಮಸ್ ಆಗಿ ಇಲ್ಲಿಯವರೆಗೂ ಉಳಿದುಕೊಂಡಿರೋ ಅಶ್ವಿನಿ ಗೌಡ (Bigg Boss Ashwini Gowda) ಎಷ್ಟು ಕಿತ್ತಾಡುತ್ತಾರೋ, ಅಷ್ಟೇ ಪ್ರೀತಿಯಿಂದಲೂ ಇರುವ ಬಗ್ಗೆ ಇದಾಗಲೇ ಹಲವು ಬಾರಿ ವೀಕ್ಷಕರು ನೋಡಿಯಾಗಿದೆ.

ಇದೀಗ ಅಡುಗೆ ಮನೆಯಲ್ಲಿ ಇವರಿಬ್ಬರ ಸಂಭಾಷಣೆಯೂ ಅಷ್ಟೇ ಕುತೂಹಲವಾಗಿದೆ. ರಕ್ಷಿತಾ ಶೆಟ್ಟಿ ಸಾಫ್ಟ್​ ಎನ್ನಿಸಿದರೂ, ಜಗಳಕ್ಕೆ ನಿಂತರೆ ಮುಗಿಯಿತು. ಆದರೆ ಅರ್ಧಂಬರ್ಧ ಕನ್ನಡ ಮಾತನಾಡುವ ಕಾರಣ, ಆಕೆ ಜಗಳ ಮಾಡಿದರೆ ಅದೊಂದು ರೀತಿಯಲ್ಲಿ ನೋಡುಗರಿಗೆ ಖುಷಿಯೂ ಕೊಡುತ್ತದೆ ಅನ್ನಿ.

ಇದೀಗ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಅವರಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈರುಳ್ಳಿ, ಹಸಿಮೆಣಸಿನ ಕಾಯಿ ಹೆಚ್ಚಿ ಇಟ್ಟಿದ್ದಾರೆ. ಹಸಿಮೆಣಸಿನಕಾಯಿಯನ್ನು ನೋಡಿದ ರಕ್ಷಿತಾ, ಅಶ್ವಿನಿ ಅವರಿಗೆ ನೋಡಿ ನನ್ನ ಬಾಯಿ ಈ ಹಣಿಶಿಣಮೆಣಶಿಣಕಾಯಿ ರೀತಿ. ಆದರೆ ನಾನು ಒಳಗಿಂದ ರಸಗುಲ್ಲಾ ಎಂದಿದ್ದಾರೆ!

ಹಾಗೆನೇ ನನ್ನ ಹೃದಯ ಬೆಣ್ಣೆಯಂತೆ ಇದೆ ಎಂದಾಗ ಅದಕ್ಕೆ ಅಶ್ವಿನಿ ಗೌಡ ಒಹೊ, ಹೌದಾ ಎಂದು ನಕ್ಕಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಬಾಂಡಿಂಗ್​ ನೋಡಿ ಬಿಗ್​ಬಾಸ್​ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ.

Source link

Leave a Reply

Your email address will not be published. Required fields are marked *