ಬೆಂಗಳೂರು, (ಜನವರಿ 11): ಅವರೆಲ್ಲಾ ದಿನಕೂಲಿ ನಂಬಿ ಬದುಕೋರು.. ಆದರೆ ಅವರ ಬದುಕು ಇಂದು ದುಸ್ತರವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಸ್ಪಂಜುಗಳು ಹೊತ್ತಿ ಉರಿದಿದ್ದು ಸಾಕಷ್ಟು ನಷ್ಟವಾಗಿದೆ. ಹೌದು… ನಿನ್ನೆ ತಡರಾತ್ರಿ 2:30ರ ಸುಮಾರಿಗೆ ಎಲ್ಲರೂ ಕೂಡ ನಿದ್ರೆಯಲ್ಲಿದ್ರು. ಆದರೆ ಏಕಾಏಕಿ ಹೊತ್ತಿ ಉರಿದ ಬೆಂಕಿ ಕೂಲಿನಗರದ ನಿವಾಸಿಗಳ ನಿದ್ದೆಯನ್ನ ಹಾಳು ಮಾಡಿ ಬದುಕನ್ನ ಬೀದಿಗೆ ತಂದಿದೆ. ನಂದಿನಿ ಲೇಔಟ್ನ ಕೂಲಿನಗರದ ನಿವಾಸಿಗಳು ಸ್ಪಾಂಜ್ಗಳನ್ನ ಮಾರಿ ಜೀವನ ಸಾಗಿಸೋರು. ಹೀಗಾಗಿ ತಮ್ಮ ಮನೆಗಳ ಮೇಲೆ ಸ್ಪಾಂಜ್ಗಳ ಮೂಟೆಯನ್ನ ಇರಿಸಿದ್ರು. ಆದರೆ ತಡರಾತ್ರಿ ಏಕಾಏಕಿ ಸ್ಪಾಂಜು ಹೊತ್ತಿ ಉರಿದಿದೆ. ಸ್ಪಾಂಜ್ ಹೊತ್ತಿದ ಪರಿಣಾಮ ಬೆಂಕಿ ಮುಗಿಲೆತ್ತರಕ್ಕೆ ಹಬ್ಬಿದ್ದು, ಅಲ್ಲಿದ್ದ ಸುಮಾರು 10ರಿಂದ 15 ಮನೆಗಳಿಗೆ ಹಾನಿಯಾಗಿದೆ. ಇನ್ನು ಮನೆ ಮುಂದೆ ನಿಲ್ಲಿಸಿದ 7-8 ಬೈಕ್ ಹಾಗೂ ಟಾಟಾ ಏಸ್ಗಳು ಸುತ್ತು ಹೋಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದು…, ಅದೃಷ್ಟವಶಾತ್ ಯಾರಿಗೂ ತೊಂದರೆಯಾಗುವುದಿಲ್ಲ. ಇದು ಆಕಸ್ಮಿಕ ಬೆಂಕಿಯೋ ಅಥವಾ ದ್ವೇಷದಿಂದ ಹೊತ್ತಿಸಿದ ಕಿಡಿಯೋ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.