ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಅವರದ್ದು ಒಳ್ಳೆಯ ಜೋಡಿ. ಒಮ್ಮೊಮ್ಮೆ ಬಹಳ ಆತ್ಮೀಯರಾಗಿರುವ ಇವರು ಕೆಲವೊಮ್ಮೆ ಕಿತ್ತಾಡುತ್ತಾರೆ. ಗೆಳೆತನವನ್ನು ಈ ಜೋಡಿ ಚೆನ್ನಾಗಿ ಕಾಪಾಡಿಕೊಂಡು ಬಂದಿದೆ. ಗಿಲ್ಲಿ, ಪ್ರೀತಿ-ಪ್ರೇಮ ಎಂದು ಕಾವ್ಯಾರ ಕಾಲೆಳೆಯುತ್ತಾರಾದರೂ ಕಾವ್ಯಾ ಅದಕ್ಕೆಲ್ಲ ಅವಕಾಶ ಕೊಟ್ಟಿದ್ದೇ ಇಲ್ಲ. ಹಾಗೆಂದು ಗೆಳೆತನವನ್ನು ದೂರ ತಳ್ಳಿಲ್ಲ. ಇದೀಗ ಫಿನಾಲೆ ವಾರಕ್ಕೆ ಮುಂಚೆ ಬಿಗ್ಬಾಸ್ ಮನೆಯಲ್ಲಿ ಕೆಲವು ಅದ್ಭುತಗಳು ನಡೆದಿವೆ. ಗಿಲ್ಲಿ, ಕಾವ್ಯ ಬಳಿ ಕ್ಷಮೆ ಕೇಳಿ ಉಡುಗೊರೆ ಕೊಟ್ಟಿದ್ದಾರೆ. ಆದರೆ ಕಾವ್ಯಾ ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.
ಈ ಪಯಣದಲ್ಲಿ ನಿಮ್ಮ ಜೊತೆಗೆ ನಿಂತ ವ್ಯಕ್ತಿಗೆ ನಿಮ್ಮ ವಸ್ತುವನ್ನು ಉಡುಗೊರೆಯಾಗಿ ಹೇಳಿ ಧನ್ಯವಾದ ಎಂದು ಸುದೀಪ್ ಹೇಳಿದರು. ಕೂಡಲೇ ಗಿಲ್ಲಿ, ಕಾವ್ಯಗೆ ಕೈಗೆ ಬೆಳ್ಳಿಯ ಬ್ರೇಸ್ ಲೆಟ್ ಒಂದನ್ನು ಪ್ರಕಟಿಸಿದೆ. ಅಸಲಿಗೆ ಕಾವ್ಯಾರ ಮನೆಯವರು ಗಿಲ್ಲಿಗೆ ಬ್ರೇಸ್ಲೆಟ್ ಒಂದನ್ನು ನೀಡಿದ್ದರು. ಅದನ್ನೇ ಮರಳಿ ಕೊಡುತ್ತಿದ್ದೀಯ ಎಂದು ಕಾವ್ಯ ಕೇಳಿದರು. ಅದಕ್ಕೆ ಗಿಲ್ಲಿ, ಇಲ್ಲ ಅದು ನನ್ನ ಬಳಿಯೇ ಇದೆ. ಇದು ನಿನಗೆ ಕೊಡಲೆಂದೇ ಹೊಸದು ತರಿಸಿಕೊಂಡಿದ್ದೆ ಎಂದು ಹೇಳಿ ಉಡುಗೊರೆಯನ್ನು ಕೊಟ್ಟರು. ಇನ್ನು ಕಾವ್ಯ, ಗಿಲ್ಲಿ ಇಷ್ಟು ದಿನ ತಮ್ಮ ಪರವಾಗಿ ನಿಂತಿದ್ದಕ್ಕೆ ಅವರ ಬಾಚಣಿಗೆ ಗಿಲ್ಲಿಗೆ ಆಯ್ಕೆ. ಅಂದಹಾಗೆ ಗಿಲ್ಲಿ, ಕಾವ್ಯಕ್ಕೆ ಉಡುಗೊರೆ ಕೊಡುವ ಮೊದಲು, ಇತ್ತೀಚೆಗೆ ಕಾವ್ಯಾ ಬಗ್ಗೆ ತಾವು ಆಡಿದ ಮಾತು ಸರಿಯಿಲ್ಲ. ಏನೋ ತಮಾಷೆ ಮಾಡಲು ಹೋಗಿ ಏನೋ ಹೇಳಿಬಿಟ್ಟೆ ಹಾಗೆ ಹೇಳಬಾರದಿತ್ತು ಎಂದು ಹೇಳಿ ಕ್ಷಮೆ ಕೇಳಿದರು.
ಇದನ್ನೂ ಓದಿ:ಗ್ಲಾಮರಸ್ ಅವತಾರದಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ ರಿಶಾ ಗೌಡ: ವಿಡಿಯೋ
ಯಾರು ನಿಮ್ಮನ್ನು ಕಾಡಿದ್ದಾರೋ ಅವರಿಗೆ ಶಿಕ್ಷೆ ಕೊಡುವ ಅವಕಾಶವನ್ನು ಸುದೀಪ್ ಅವರು ಸ್ಪರ್ಧಿಗಳಿಗೆ ತೋರಿಸಿದ್ದಾರೆ. ಮನೆಯ ಎಲ್ಲ ಸ್ಪರ್ಧಿಗಳು ಅತಿ ಹೆಚ್ಚು ಶಿಕ್ಷೆ ಕೊಟ್ಟಿದ್ದು ಗಿಲ್ಲಿಗೆ. ಕೈ ಮತ್ತು ಕಾಲಿನ ಕೂದಲಿಗೆ ವ್ಯಾಕ್ಸ್ ಹೇರ್ ರಿಮೂವರ್ ಹಾಕಿ ಕೀಳುವುದು, ಕಹಿಯಾದ ಕಷಾಯ ಕುಡಿಸುವುದು, ಲಿಂಬೆ ಮತ್ತು ಮೆಣಸಿನಕಾಯಿಯನ್ನು ಒಟ್ಟಿಗೆ ತಿನ್ನುವುದು ಮತ್ತು ದೊಡ್ಡದಾದ, ಅಗಲವಾದ ನಕಲಿ ಕೈ ಇಂದ ಹೊಡೆಯುವುದು. ಈ ನಾಲ್ಕರಲ್ಲಿ ಯಾವ ಶಿಕ್ಷೆಯನ್ನು ಬೇಕಾದರೂ ನೀಡಬಹುದಾಗಿತ್ತು.
ಅದೇ ಕಾವ್ಯ, ಗಿಲ್ಲಿಗೆ ವ್ಯಾಕ್ಸ್ ಹಾಕಿ ಹೇರ್ ರಿಮೂವ್ ಮಾಡಿದರು. ಅದಾದ ಬಳಿಕ ಅಶ್ವಿನಿ, ಗಿಲ್ಲಿಗೆ ಕಷಾಯ ಕುಡಿಸಿದರು. ರಘು ಬಂದು ಕೈಯಿಂದ ಹೊಡೆದರು. ರಾಶಿಕಾ ಬಂದು ಮೆಣಸಿನಕಾಯಿ-ನಿಂಬೆ ತಿನ್ನುವಂತೆ ಮಾಡಿದರು ಹೀಗೆ ಹೆಚ್ಚು ಮಂದಿ ಗಿಲ್ಲಿಗೆ ಶಿಕ್ಷೆ ವಿಧಿಸಿದರು. ಗಿಲ್ಲಿ ಮಾತ್ರ ರಘುಗೆ ಶಿಕ್ಷೆ. ರಘುಗೆ ಹೇರ್ ರಿಮೂವರ್ ಹಾಕಿ ತೆಗೆದರು.
ಈ ವಾರ ರಾಶಿಕಾ, ಬಿಗ್ಬಾಸ್ ಮನೆಯಿಂದ ಎವಿಕ್ಟ್ ಆಗಿದ್ದಾರೆ. ಆ ಮೂಲಕ ಗಿಲ್ಲಿ, ಅಶ್ವಿನಿ, ಧ್ರುವಂತ್, ರಘು, ಧನುಶ್, ರಕ್ಷಿತಾ ಶೆಟ್ಟಿ ಮತ್ತು ಕಾವ್ಯ ಮಾತ್ರವೇ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದು, ಇವರೆಲ್ಲ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ಈ ವಾರ ಮಧ್ಯದಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂದು ನೋಡಬೇಕಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:12 pm, ಭಾನುವಾರ, 11 ಜನವರಿ 26